ಯೂಸುಫ್ ಹಾಜಿ ನಿಧನಕ್ಕೆ ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಸಂತಾಪ - Karavali Times ಯೂಸುಫ್ ಹಾಜಿ ನಿಧನಕ್ಕೆ ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಸಂತಾಪ - Karavali Times

728x90

22 April 2020

ಯೂಸುಫ್ ಹಾಜಿ ನಿಧನಕ್ಕೆ ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಸಂತಾಪ

ಮರ್ ಹೂಂ‌ ಹಾಜಿ ಜಿ ಯೂಸುಫ್ಬಂಟ್ವಾಳ (ಕರಾವಳಿ ಟೈಮ್ಸ್) : ಗೋಳ್ತಮಜಲು ಶಂಸುಲ್ ಉಲಮಾ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ  ಹಾಜಿ ಜಿ ಯೂಸುಫ್ ಅವರ ನಿಧನಕ್ಕೆ ಆಲಡ್ಕ ಎಸ್ಕೆಎಸ್ಸೆಸ್ಸೆಫ್ ತೀವ್ರ ಸಂತಾಪ ಸೂಚಿಸಿದೆ.

ಈ ಬಗ್ಗೆ ಸಂತಾಪ ಹೇಳಿಕೆ ನೀಡಿರುವ ಶಾಖೆಯ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಅವರು, ಯೂಸುಫ್ ಹಾಜಿ ಎಸ್ಕೆಎಸ್ಸೆಸ್ಸೆಫ್ ಸಹಿತ ಸಮಸ್ತ ಪೋಷಕ ಸಂಘಟನೆಗಳ ಶ್ರೇಯೋಭಿವೃದ್ದಿಗೆ ಆಹೋ ರಾತ್ರಿ ಶ್ರಮಪಟ್ಟವರಾಗಿದ್ದು, ಸಮಸ್ತದ ಎಲ್ಲ ಹಿರಿ-ಕಿರಿಯ ಪಂಡಿತರ ಆಶೀರ್ವಾದವನ್ನು ಸಂಪಾದಿಸಿದ್ದರು. ಕೊಡುಗೈ ದಾನಿಯಾಗಿ ಗುರುತಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕನಿಷ್ಠ ಸ್ವಯಂ ಸೇವಕರಂತೆ ಕೆಲಾ ಮಾಡುತ್ತಿದ್ದ ಯೂಸುಫ್ ಹಾಜಿ ಅವರ ಅಗಲಿಕೆ ಸಮಾಜಕ್ಕೆ ಅತ್ಯಂತ ತುಂಬಲಾರದ ನಷ್ಟವಾಗಿದೆ. ಸರ್ವಶಕ್ತನಾದ ಅಲ್ಲಾಹು ಅವರ ಬರ್ಝಖೀ ಜೀವನವನ್ನು ಅತ್ಯಂತ ಸಂತೋಷದಾಯಕವಾಗಿಸಲಿ ಎಂದು ಪ್ರಾರ್ಥಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಯೂಸುಫ್ ಹಾಜಿ ನಿಧನಕ್ಕೆ ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಸಂತಾಪ Rating: 5 Reviewed By: karavali Times
Scroll to Top