ಬೋಳಂಗಡಿ ಮುಸ್ತಫಾರಿಂದ ಸರ್ವಧರ್ಮೀಯರಿಗೆ ತರಕಾರಿ ವಿತರಣೆ - Karavali Times ಬೋಳಂಗಡಿ ಮುಸ್ತಫಾರಿಂದ ಸರ್ವಧರ್ಮೀಯರಿಗೆ ತರಕಾರಿ ವಿತರಣೆ - Karavali Times

728x90

29 April 2020

ಬೋಳಂಗಡಿ ಮುಸ್ತಫಾರಿಂದ ಸರ್ವಧರ್ಮೀಯರಿಗೆ ತರಕಾರಿ ವಿತರಣೆ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ಸಮೀಪದ ಬೋಳಂಗಡಿ ಎಂ.ಎಚ್. ಸ್ಟೋರ್ ಮಾಲಕ ಎಂ.ಎಚ್. ಮುಸ್ತಫಾ ಇವರು ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾಗಿರುವ ಬೋಳಂಗಡಿ-ಬೊಂಡಾಲ ಪರಿಸರದ ಹಿಂದೂ-ಮುಸ್ಲಿಂ-ಕ್ರೈಸ್ತ ಸರ್ವಧರ್ಮೀಯ ಬಾಂಧವರ ಅನುಕೂಲಕ್ಕಾಗಿ ತರಕಾರಿ ಕಿಟ್‍ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಇಲ್ಲಿನ ಸುಮಾರು 325 ಕುಟುಂಬಗಳಿಗೆ ದಿನಬಳಕೆಯ ತರಕಾರಿಗಳನ್ನು ಕಿಟ್ ರೂಪದಲ್ಲಿ ನೀಡಿದ್ದು, ಕಿಟ್‍ನಲ್ಲಿ ಬಟಾಟೆ, ಟೊಮ್ಯಾಟೋ, ಸೌತೆ, ಕಾಯಿ ಮೆಣಸು, ಶುಂಠಿ, ಕ್ಯಾರೆಟ್, ಬೀಟ್‍ರೂಟ್, ಮುಳ್ಳು ಸೌತೆ, ಕೊತ್ತಂಬರಿ, ಸುವರ್ಣಗೆಡ್ಡೆ ಇತ್ಯಾದಿ ತರಕಾರಿಗಳನ್ನು ನೀಡಲಾಗಿದೆ.

ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಜನರಿಗೆ ತಮ್ಮ ಕೈಲಾದ ನೆರವು ನೀಡುವ ಉದ್ದೇಶದಿಂದ ಮುಸ್ತಫಾ ಅವರು ಈ ತರಕಾರಿ ಕಿಟ್ ಒದಗಿಸಿಕೊಡುವ ನಿರ್ಧಾರಕ್ಕೆ ಬಂದು ಅದನ್ನು ಪೂರೈಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಬೋಳಂಗಡಿ ಮುಸ್ತಫಾರಿಂದ ಸರ್ವಧರ್ಮೀಯರಿಗೆ ತರಕಾರಿ ವಿತರಣೆ Rating: 5 Reviewed By: karavali Times
Scroll to Top