ವೈರಸ್ ನಾಶಕ ದ್ರಾವಣ ಸಿಂಪಡನೆಯಲ್ಲಿ ಕೆಳಗಿನಪೇಟೆಗಿಲ್ಲ ಕಿಮ್ಮತ್ತು : ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳ ನಿರ್ಲಕ್ಷ್ಯಕ್ಕೆ ಜೆಡಿಎಸ್ ಮುಖಂಡ ಆಕ್ರೋಶ - Karavali Times ವೈರಸ್ ನಾಶಕ ದ್ರಾವಣ ಸಿಂಪಡನೆಯಲ್ಲಿ ಕೆಳಗಿನಪೇಟೆಗಿಲ್ಲ ಕಿಮ್ಮತ್ತು : ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳ ನಿರ್ಲಕ್ಷ್ಯಕ್ಕೆ ಜೆಡಿಎಸ್ ಮುಖಂಡ ಆಕ್ರೋಶ - Karavali Times

728x90

7 April 2020

ವೈರಸ್ ನಾಶಕ ದ್ರಾವಣ ಸಿಂಪಡನೆಯಲ್ಲಿ ಕೆಳಗಿನಪೇಟೆಗಿಲ್ಲ ಕಿಮ್ಮತ್ತು : ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳ ನಿರ್ಲಕ್ಷ್ಯಕ್ಕೆ ಜೆಡಿಎಸ್ ಮುಖಂಡ ಆಕ್ರೋಶ

ಬಂಟ್ವಾಳ ಪೇಟೆಯಲ್ಲಿ ಅಗ್ನಿಶಾಮಕ ವಾಹನದ ಮೂಲಕ ವೈರಾಣು ನಾಶಕ ದ್ರಾವಣ ಸಿಂಪಡಿಸುತ್ತಿರುವ ದೃಶ್ಯ

ಬಂಟ್ವಾಳ ಪೇಟೆಯಲ್ಲಿ ಅಗ್ನಿಶಾಮಕ ವಾಹನದ ಮೂಲಕ ವೈರಾಣು ನಾಶಕ ದ್ರಾವಣ ಸಿಂಪಡಿಸುತ್ತಿರುವ ದೃಶ್ಯ 
 
ಜೆಡಿಎಸ್ ಮುಖಂಡ ಹಾರೂನ್ ರಶೀದ್


ಬಂಟ್ವಾಳ (ಕರಾವಳಿ ಟೈಮ್ಸ್) : ಜಗತ್ತಿನಾದ್ಯಂತ ತನ್ನ ಕಬಂಧಬಾಹು ವಿಸ್ತರಿಸಿ ಜನ ಜೀವನವನ್ನೇ ಅಲ್ಲೋಲ-ಕಲ್ಲೋಲ ಮಾಡಿರುವ ಕೋವಿಡ್-19 ವೈರಸ್ ನಿರ್ಮೂಲನೆಗಾಗಿ ದೇಶದ ಬಹುತೇಕ ನಗರ ಪ್ರದೇಶಗಳಲ್ಲಿ ವೈರಸ್ ನಾಶಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿರುವುದು ಶ್ಲಾಘನೀಯ ಕ್ರಮ, ಆದರೆ ಬಂಟ್ವಾಳ ಪುರಸಭಾಧಿಕಾರಿಗಳು ಮಾತ್ರ ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶವಾಗಿರುವ ಬಂಟ್ವಾಳ-ಕೆಳಗಿನಪೇಟೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುವುದರ ಮೂಲಕ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದು ಸ್ಥಳೀಯ ಜೆಡಿಎಸ್ ಮುಖಂಡ ಹಾರೂನ್ ರಶೀದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಯಿಸಿರುವ ಅವರು ಬಂಟ್ವಾಳ ಮುಖ್ಯ ಪೇಟೆ, ಪಾಣೆಮಂಗಳೂರು ಪೇಟೆ ಸಹಿತ ಹಲವು ಪ್ರದೇಶಗಳಲ್ಲಿ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ವೈರಸ್ ನಾಶಕ ದ್ರಾವಣ ಸಿಂಪಡಿಸುವ ಕ್ರಮ ಕೈಗೊಂಡಿದ್ದಾರೆ. ಬಂಟ್ವಾಳ ಮುಖ್ಯ ಪೇಟೆಯ ಅನತಿ ದೂರದಲ್ಲಿರುವ ಹಾಗೂ ಬಂಟ್ವಾಳ ಪುರಸಭಾ ಕಛೇರಿಯ ಕೂಗಳತೆಯ ದೂರದಲ್ಲಿರುವ ಕೆಳಗಿನಪೇಟೆ ಜಂಕ್ಷನ್ನಿನಲ್ಲಿ ಸದ್ರಿ ವೈರಸ್ ನಾಶಕ ಸಿಂಪಡಣೆಗೆ ನಿರಾಕರಿಸುವ ಮೂಲಕ ಪುರಸಭಾಧಿಕಾರಿಗಳು ವಿಭಜಿಸಿ ಆಳುವ ನೀತಿ ತೋರಿದ್ದಾರೆ ಎಂದು ದೂರಿದ್ದಾರೆ.

    ಬಂಟ್ವಾಳ ಮುಖ್ಯ ಪೇಟೆಯಿಂದ ಅಂಚೆ ಕಛೇರಿವರೆಗೆ ಅಧಿಕಾರಿಗಳು ಈ ದ್ರಾವಣ ಸಿಂಪಡಣೆ ನಡೆಸಿದ್ದು, ಅದರ ಬಳಿಕ ಕೆಳಗಿನಪೇಟೆಯಲ್ಲಿ ಈ ಕಾರ್ಯಕ್ಕೆ ಮುಂದಾಗಿಲ್ಲ. ಇದು ಅಧಿಕಾರಿಗಳ ಸ್ವಾರ್ಥ ಹಾಗೂ ದ್ವಂದ್ವ ಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಕಾರಣಕ್ಕೆ ಕೆಳಗಿನಪೇಟೆಯನ್ನು ಅಧಿಕಾರಿಗಳು ನಿರ್ಲಕ್ಷಿಸಲು ಕಾರಣವಾಗಿರಬಹುದೇ ಎಂದವರು ಸಂಶಯ ವ್ಯಕ್ತಪಡಿಸಿದ್ದಾರೆ.

    ಪುರಸಭಾಧಿಕಾರಿಗಳ ಈ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿರುವ ಹಾರೂನ್ ರಶೀದ್ ತಕ್ಷಣ ಅಧಿಕಾರಿಗಳು ನಗರದ ಎಲ್ಲಾ ಪ್ರದೇಶಗಳೂ ವೈರಾಣು ನಾಶಕ ಸಿಂಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ವೈರಸ್ ನಾಶಕ ದ್ರಾವಣ ಸಿಂಪಡನೆಯಲ್ಲಿ ಕೆಳಗಿನಪೇಟೆಗಿಲ್ಲ ಕಿಮ್ಮತ್ತು : ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳ ನಿರ್ಲಕ್ಷ್ಯಕ್ಕೆ ಜೆಡಿಎಸ್ ಮುಖಂಡ ಆಕ್ರೋಶ Rating: 5 Reviewed By: karavali Times
Scroll to Top