ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ಬಂಟ್ವಾಳ ಪೊಲೀಸ್ ದಾಳಿ : ಇಬ್ಬರ ದಸ್ತಗಿರಿ - Karavali Times ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ಬಂಟ್ವಾಳ ಪೊಲೀಸ್ ದಾಳಿ : ಇಬ್ಬರ ದಸ್ತಗಿರಿ - Karavali Times

728x90

7 April 2020

ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ಬಂಟ್ವಾಳ ಪೊಲೀಸ್ ದಾಳಿ : ಇಬ್ಬರ ದಸ್ತಗಿರಿಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆಸುತ್ತಿದ್ದ ಅಕ್ರಮ ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಗಳಾದ ಅಗ್ರಾರ್-ಕೊಡಿ ನಿವಾಸಿಗಳಾದ ಆಲ್ಟರ್ ಪಿಂಟೋ ಹಾಗೂ ರೋಶನ್ ರೋನಿ ಫೆರ್ನಾಂಡಿಸ್ ಎಂಬವರನ್ನು ಬಂಧಿಸಿದ್ದಾರೆ.

    ನಿಷೇಧಿತ ಕಳ್ಳಭಟ್ಟಿ ಸಾರಾಯಿಯನ್ನು ಅಗ್ರಾರ್-ಕೋಡಿಯ ಮನೆಯಲ್ಲಿ ಅಕ್ರಮವಾಗಗಿ ತಯಾರಿಸುವ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿ ವೇಳೆ ಪೊಲೀಸರು ಸಾರಾಯಿ ತಯಾರಿಸಲು ಬಳಸಿರುವ ಸಾಮಾಗ್ರಿಗಳು, ಸ್ಕೂಟರ್ ಸಹಿತ 20 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ಬಂಟ್ವಾಳ ಪೊಲೀಸ್ ದಾಳಿ : ಇಬ್ಬರ ದಸ್ತಗಿರಿ Rating: 5 Reviewed By: karavali Times
Scroll to Top