ಭಾರತದ ಮನವಿಗೆ ಅಸ್ತು ಎಂದ ಲಂಡನ್ ಕೋರ್ಟ್ : ವಿಜಯ ಮಲ್ಯ ಗಡಿಪಾರು ಹಾದಿ ಸುಗಮ - Karavali Times ಭಾರತದ ಮನವಿಗೆ ಅಸ್ತು ಎಂದ ಲಂಡನ್ ಕೋರ್ಟ್ : ವಿಜಯ ಮಲ್ಯ ಗಡಿಪಾರು ಹಾದಿ ಸುಗಮ - Karavali Times

728x90

20 April 2020

ಭಾರತದ ಮನವಿಗೆ ಅಸ್ತು ಎಂದ ಲಂಡನ್ ಕೋರ್ಟ್ : ವಿಜಯ ಮಲ್ಯ ಗಡಿಪಾರು ಹಾದಿ ಸುಗಮ



ಲಂಡನ್ (ಕರಾವಳಿ ಟೈಮ್ಸ್) : ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವಂಚಿಸಿ ಬಳಿಕ ದೇಶದಿಂದ ಪರಾರಿಯಾಗಿದ್ದ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕೆಂಬ ಮನವಿ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಯು.ಕೆ. ಕೋರ್ಟ್ ವಜಾ ಮಾಡಿದ್ದು, ಯಾವುದೇ ಕ್ಷಣ ಗಡಿಪಾರು ಮಾಡುವ ಸಾಧ್ಯತೆ ಇದೆ.

ಭಾರತಕ್ಕೆ ಹಸ್ತಾಂತರ ಮಾಡುವುದನ್ನು ಪ್ರಶ್ನಿಸಿ 2018ರಲ್ಲಿ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ದ  ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು. ಕಿಂಗ್ ಫಿಷರ್ ಏರ್ ಲೈನ್ಸ್‍ಗಾಗಿ ಭಾರತದಲ್ಲಿನ ಹಲವು ಬ್ಯಾಂಕ್‍ಗಳಿಂದ 9000 ಕೋಟಿ ರೂಪಾಯಿ ಸಾಲ ಮಾಡಿದ್ದು, ಅದರ ಜತೆಗೆ ಅಕ್ರಮ ಹಣಕಾಸು ವರ್ಗಾವಣೆ ಮಾಡಿದ ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ  ವಿಜಯ್ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಬೇಕೆಂದು ಭಾರತ ಮನವಿ ಮಾಡಿತ್ತು.

ಯಾವುದೇ ತಪ್ಪು ಮಾಡಿಲ್ಲ. ನಾನು ಹಣ ವಾಪಸ್ ಮಾಡಲು ಸಿದ್ಧ, ಆದರೆ  ಬ್ಯಾಂಕ್ ಹಣ ಪಡೆಯಲು ಸಿದ್ಧವಿಲ್ಲ ಎಂದು ವಿಜಯ ಮಲ್ಯ ಹೇಳಿಕೊಂಡಿದ್ದರು. ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂಬ ಮನವಿಯನ್ನು ಪುರಸ್ಕರಿಸಿ, ಲಂಡನ್‍ನಲ್ಲಿ 2017 ರಲ್ಲಿ ಲಂಡನ್‍ನಲ್ಲಿ ಮಲ್ಯರನ್ನು ಬಂಧಿಸಲಾಗಿತ್ತು. ನಂತರ ಅವರು  ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗೆ ಬಂದಿದ್ದರು. ಜಾರಿ ನಿರ್ದೇಶನಾಲಯ ಪ್ರಮಾಣ ಪತ್ರ ಸಲ್ಲಿಸಿದ ಮೇಲೆ ಅದೇ ವರ್ಷ ಅಕ್ಟೋಬರ್‍ನಲ್ಲಿ ಮತ್ತೊಮ್ಮೆ ಮಲ್ಯರನ್ನು ಬಂಧಿಸಲಾಗಿತ್ತು. ಈಗ ಭಾರತದ ಮನವಿಗೆ ಕೋರ್ಟ್ ಪುರಸ್ಕಾರ  ನೀಡಿದಂತಾಗಿದ್ದು, ಗಡಿಪಾರು ಹಾದಿ ಸುಗಮವಾಗಲಿದೆ.
  • Blogger Comments
  • Facebook Comments

0 comments:

Post a Comment

Item Reviewed: ಭಾರತದ ಮನವಿಗೆ ಅಸ್ತು ಎಂದ ಲಂಡನ್ ಕೋರ್ಟ್ : ವಿಜಯ ಮಲ್ಯ ಗಡಿಪಾರು ಹಾದಿ ಸುಗಮ Rating: 5 Reviewed By: karavali Times
Scroll to Top