ಮೀನುಗಾರರ ಸಾಲ ಮನ್ನಾ ಸ್ವಾಗತಾರ್ಹ, ಚಾಲಕ ವರ್ಗದ ಸಾಲ ಕೂಡಾ ಮನ್ನಾ ಆಗಲಿ : ಬೇಬಿ ಕುಂದರ್ - Karavali Times ಮೀನುಗಾರರ ಸಾಲ ಮನ್ನಾ ಸ್ವಾಗತಾರ್ಹ, ಚಾಲಕ ವರ್ಗದ ಸಾಲ ಕೂಡಾ ಮನ್ನಾ ಆಗಲಿ : ಬೇಬಿ ಕುಂದರ್ - Karavali Times

728x90

27 April 2020

ಮೀನುಗಾರರ ಸಾಲ ಮನ್ನಾ ಸ್ವಾಗತಾರ್ಹ, ಚಾಲಕ ವರ್ಗದ ಸಾಲ ಕೂಡಾ ಮನ್ನಾ ಆಗಲಿ : ಬೇಬಿ ಕುಂದರ್

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್


ಬಂಟ್ವಾಳ (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ರಾಜ್ಯದ ಮೀನುಗಾರರ ಹಿತ ಕಾಪಾಡಲು ಅವರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದು, ಅತ್ಯಂತ ಸಂತೋಷದ ವಿಚಾರ. ಅದೇ ರೀತಿ ಲಾಕ್‍ಡೌನ್ ಸಂದರ್ಭ ಸಂಕಷ್ಟದಲ್ಲಿರುವ ಚಾಲಕ ವರ್ಗದ ಸಾಲವನ್ನು ಕೂಡಾ ಮನ್ನಾ ಮಾಡುವ ಮಹತ್ವದ ನಿರ್ಧಾರಕ್ಕೆ ಸರಕಾರ ತಕ್ಷಣ ಬರಬೇಕು ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಆಗ್ರಹಿಸಿದ್ದಾರೆ.

ಅಟೋ ಚಾಲಕರಿಂದ ಹಿಡಿದು, ಕಾರು, ಸಣ್ಣ ಹಾಗೂ ದೊಡ್ಡ ಟೆಂಪೋ, ಲಾರಿ ಮೊದಲಾದ ಚಾಲಕ ವರ್ಗ ಕೂಡಾ ದಿನಕೂಲಿಯನ್ನೇ ನಂಬಿ ಬದುಕು ಸಾಗಿಸುತ್ತಿರುವುದಾಗಿರುತ್ತದೆ. ಇಂತಹ ಬಡ ಚಾಲಕರ ಕುಟುಂಬಗಳು ಇದೀಗ ಲಾಕ್‍ಡೌನ್ ಸಂದರ್ಭದಿಂದಾಗಿ ದುಡಿಮೆ ಇಲ್ಲದೆ ಸಾಲದ ಕಂತು ಕಟ್ಟಲಾಗದೆ ತೀವ್ರ ಸಂಕಷ್ಟ ಎದುರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಾಮಾನ್ಯ ವಿಚಾರವಾಗಿರುತ್ತದೆ. ಈ ಬಗ್ಗೆ ಸರಕಾರ ಸಕಾಲದಲ್ಲಿ ಎಚ್ಚೆತ್ತು ಚಾಲಕ ವರ್ಗದ ಎಲ್ಲಾ ವಿಧ ಸಾಲಗಳನ್ನು ಮನ್ನಾ ಮಾಡುವ ಮೂಲಕ ಬಡ ಚಾಲಕ ವೃತ್ತಿಯ ವರ್ಗದ ಕುಟುಂಬದ ಹಿತ ಕಾಪಾಡಬೇಕು ಎಂದವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೇಡಿಕೆಯ ಪಟ್ಟಿ ತಯಾರಿಸಿ ಕೆಪಿಸಿಸಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಲ್ಲಿಸು ಮೂಲಕ ಸರಕಾರಕ್ಕೆ ಒತ್ತಡ ಹಾಕಲು ಯೋಚನೆ ನಡೆಸಲಾಗಿದೆ ಎಂದು ಬೇಬಿ ಕುಂದರ್ ಪತ್ರಿಕೆಗೆ ತಿಳಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಮೀನುಗಾರರ ಸಾಲ ಮನ್ನಾ ಸ್ವಾಗತಾರ್ಹ, ಚಾಲಕ ವರ್ಗದ ಸಾಲ ಕೂಡಾ ಮನ್ನಾ ಆಗಲಿ : ಬೇಬಿ ಕುಂದರ್ Rating: 5 Reviewed By: karavali Times
Scroll to Top