ನಾವೂರು, ದೇವಸ್ಯಮೂಡೂರು, ಪೂಂಜಾಲಕಟ್ಟೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ರಮಾನಾಥ ರೈ ಗೌರವ - Karavali Times ನಾವೂರು, ದೇವಸ್ಯಮೂಡೂರು, ಪೂಂಜಾಲಕಟ್ಟೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ರಮಾನಾಥ ರೈ ಗೌರವ - Karavali Times

728x90

3 May 2020

ನಾವೂರು, ದೇವಸ್ಯಮೂಡೂರು, ಪೂಂಜಾಲಕಟ್ಟೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ರಮಾನಾಥ ರೈ ಗೌರವಬಂಟ್ವಾಳ (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾವೂರು, ದೇವಸ್ಯಮೂಡೂರು, ಪೂಂಜಾಲಕಟ್ಟೆ ವಲಯದ ಎಲ್ಲಾ ಆಶಾ ಕಾರ್ಯಕರ್ತರಿಗೆ ಗೌರವರ್ಪಣೆ ನಡೆಯಿತು.

    ಊರಿನ ಜನರಲ್ಲಿ ಕೊವಿಡ್-19 ಬಗ್ಗೆ ಜಾಗೃತಿ ಮೂಡಿಸಿ ಗ್ರಾಮದ ಆರೋಗ್ಯಕ್ಕಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತರಿಗೆ ಮಾಜಿ ಸಚಿವ ರಮಾನಾಥ ರೈ ಶಾಲು ಹೊದಿಸಿ, ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಗೌರವಿಸಿದರು.

    ಈ ಸಂದರ್ಭ ಜಿ.ಪಂ. ಸದಸ್ಯ ಪದ್ಮಶೇಖರ್ ಜೈನ್, ತಾ.ಪಂ. ಸದಸ್ಯರುಗಳಾದ ಧನಲಕ್ಷ್ಮೀ ಬಂಗೇರ, ಸ್ವಪ್ನ ವಿಶ್ವನಾಥ್, ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಪೂಂಜ, ಸದಸ್ಯರುಗಳಾದ ವಿನ್ಸೆಂಟ್ ಪಿಂಟೋ ಸರಪಾಡಿ, ದಯಾನಂದ ಶೆಟ್ಟಿ ಅಮಯೀ, ಚಂದ್ರಶೇಖರ ಕರ್ಣ, ಜಯಂತ ಪ್ರಭು, ಸತೀಶ್ ಪೂಜಾರಿ, ಸೊಸೈಟಿ ಸದಸ್ಯರು ಹಾಗೂ ನಿರ್ದೇಶಕರಾದ ಪ್ರಮೋದ್ ಮತ್ತು ಚಂದ್ರಹಾಸ ಬಿಯಾನಡ್ಕ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ನಾವೂರು, ದೇವಸ್ಯಮೂಡೂರು, ಪೂಂಜಾಲಕಟ್ಟೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ರಮಾನಾಥ ರೈ ಗೌರವ Rating: 5 Reviewed By: karavali Times
Scroll to Top