ರಾಜ್ಯದಲ್ಲಿ ಇಂದು 42 ಮಂದಿ ಸೋಂಕು ದೃಢ : ಸೋಂಕಿತರ ಸಂಖ್ಯೆ 904ಕ್ಕೇರಿಕೆ - Karavali Times ರಾಜ್ಯದಲ್ಲಿ ಇಂದು 42 ಮಂದಿ ಸೋಂಕು ದೃಢ : ಸೋಂಕಿತರ ಸಂಖ್ಯೆ 904ಕ್ಕೇರಿಕೆ - Karavali Times

728x90

12 May 2020

ರಾಜ್ಯದಲ್ಲಿ ಇಂದು 42 ಮಂದಿ ಸೋಂಕು ದೃಢ : ಸೋಂಕಿತರ ಸಂಖ್ಯೆ 904ಕ್ಕೇರಿಕೆ



ಗ್ರೀನ್ ಝೋನ್ ಹಾಸನಕ್ಕೂ ತಟ್ಟಿದ ಕೊರೊನಾ ಬಿಸಿ 


ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಂಗಳವಾರ 42 ಮಂದಿಗೆ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 904ಕ್ಕೇರಿದೆ.

ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ 42 ಮಂದಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ಮಾಹಿತಿ ನೀಡಿದೆ. 42 ಮಂದಿಯ ಪೈಕಿ 31 ಮಂದಿ ಹೊರ ರಾಜ್ಯಬಂದಿರುವವರು. ಬಾಗಲಕೋಟೆಯಲ್ಲಿ 15, ಧಾರವಾಡ 9, ಹಾಸನ 5, ಬೀದರ್ 2, ಕಲಬುರಗಿ 1, ಬಳ್ಳಾರಿ 1, ಚಿಕ್ಕಬಳ್ಳಾಪುರ 1, ಯಾದಗಿರಿ 2, ಮಂಡ್ಯ 1, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಮತ್ತು ಬೆಂಗಳೂರಿನಲ್ಲಿ 3 ಹೊಸ ಕೊರೊನಾ ಪ್ರಕರಣಗಳು ದೃಢವಾಗಿದೆ.

ಸೋಂಕಿತರ ವಿವರ


1. ರೋಗಿ-863: ಬಳ್ಳಾರಿಯ 30 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
2. ರೋಗಿ-864: ಚಿಕ್ಕಬಳ್ಳಾಪುರದ 46 ವರ್ಷದ ಪುರುಷ. ರೋಗಿ 790ರ ಸಂಪರ್ಕ
3. ರೋಗಿ_865: ಬಾಗಲಕೋಟೆಯ 55 ವರ್ಷದ ಪುರುಷ. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಕೊರೊನಾ ಕಾಣಿಸಿಕೊಂಡಿದೆ.
4. ರೋಗಿ-866: ಕಲಬುರಗಿಯ 14 ವರ್ಷದ ಬಾಲಕ. ರೋಗಿ 529ರ ಸಂಪರ್ಕ
5. ರೋಗಿ-867: ಯಾದಗಿರಿಯ 33 ವರ್ಷದ ಮಹಿಳೆ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
6. ರೋಗಿ-868: ಯಾದಗಿರಿಯ 38 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
7. ರೋಗಿ-869: ಮಂಡ್ಯದ 28 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಗೆ ಪ್ರಯಾಣ ಮಾಡಿರುವ ಹಿನ್ನೆಲೆ
8. ರೋಗಿ-870: ಬಾಗಲಕೋಟೆಯ 16 ವರ್ಷದ ಹುಡುಗ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
9. ರೋಗಿ-871: ಬಾಗಲಕೋಟೆಯ 14 ವರ್ಷದ ಹುಡುಗ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
10. ರೋಗಿ-872: ಬಾಗಲಕೋಟೆಯ 33 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
11. ರೋಗಿ-873: ಬಾಗಲಕೋಟೆಯ 21 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
12. ರೋಗಿ-874: ಬಾಗಲಕೋಟೆಯ 19 ವರ್ಷದ ಹುಡುಗ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
13. ರೋಗಿ-875: ಬಾಗಲಕೋಟೆಯ 16 ವರ್ಷದ ಹುಡುಗ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
14. ರೋಗಿ-876: ಬಾಗಲಕೋಟೆಯ 34 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
15. ರೋಗಿ-877: ದಕ್ಷಿಣ ಕನ್ನಡ ಜಿಲ್ಲೆಯ 26 ವರ್ಷದ ಯುವಕ. ರೋಗಿ 507ರ ಸಂಪರ್ಕ
16. ರೋಗಿ-878: ದಕ್ಷಿಣ ಕನ್ನಡ ಜಿಲ್ಲೆಯ 50 ವರ್ಷದ ಮಹಿಳೆ. ರೋಗಿ 507ರ ಸಂಪರ್ಕ.
17. ರೋಗಿ-879: ಧಾರವಾಡದ 55 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
18. ರೋಗಿ-880: ಧಾರವಾಡದ 31 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
19. ರೋಗಿ-881: ಧಾರವಾಡದ 25 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
20. ರೋಗಿ-882: ಧಾರವಾಡದ 70 ವರ್ಷದ ವೃದ್ಧ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
21. ರೋಗಿ-883: ಧಾರವಾಡದ 26 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
22. ರೋಗಿ-884: ಧಾರವಾಡದ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
23. ರೋಗಿ-885: ಧಾರವಾಡದ 19 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
24. ರೋಗಿ-886: ಧಾರವಾಡದ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
25. ರೋಗಿ-887: ಧಾರವಾಡದ 27 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
26. ರೋಗಿ-888: ಬೆಂಗಳೂರಿನ 33 ವರ್ಷದ ಮಹಿಳೆ. ರೋಗಿ-454ರ ಸಂಪರ್ಕ
27. ರೋಗಿ-889: ಬೆಂಗಳೂರಿನ 38 ವರ್ಷದ ಮಹಿಳೆ. ರೋಗಿ-454ರ ಸಂಪರ್ಕ
28. ರೋಗಿ-890: ಬೆಂಗಳೂರಿನ 38 ವರ್ಷದ ಮಹಿಳೆ. ರೋಗಿ-454ರ ಸಂಪರ್ಕ
29. ರೋಗಿ-891: ಬೀದರ್ ನ 23 ವರ್ಷದ ಯುವಕ. ಬೀದನರ್ ನ ಕಂಟೈನ್ಮೆಂಟ್ ಝೋನ್‍ನ ಸಂಪರ್ಕ
30. ರೋಗಿ-892: ಬೀದರ್ ನ 30 ವರ್ಷದ ಪುರುಷ. ಬೀದನರ್ ನ ಕಂಟೈನ್ಮೆಂಟ್ ಝೋನ್‍ನ ಸಂಪರ್ಕ
31. ರೋಗಿ-893: ಬಾಗಲಕೋಟೆಯ 30 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
32. ರೋಗಿ-894: ಬಾಗಲಕೋಟೆಯ 17 ವರ್ಷದ ಯುವಕ.ಗುಜರಾತ್‍ನ ಅಹಮದಾಬಾದ್‍ಗೆದ್ ಪ್ರಯಾಣದ ಹಿನ್ನೆಲೆ
33. ರೋಗಿ-895: ಬಾಗಲಕೋಟೆಯ 32 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
34. ರೋಗಿ-896: ಬಾಗಲಕೋಟೆಯ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
35. ರೋಗಿ-897: ಬಾಗಲಕೋಟೆಯ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆದ್ ಪ್ರಯಾಣದ ಹಿನ್ನೆಲೆ
36. ರೋಗಿ-898: ಬಾಗಲಕೋಟೆಯ 26 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
37. ರೋಗಿ-899: ಬಾಗಲಕೋಟೆಯ 26 ವರ್ಷದ ವೃದ್ಧ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
38. ರೋಗಿ-900: ಹಾಸನದ 36 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ
39. ರೋಗಿ-901: ಹಾಸನದ 27 ವರ್ಷದ ಮಹಿಳೆ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ
40. ರೋಗಿ-902: ಹಾಸನದ 7 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ
41. ರೋಗಿ-903: ಹಾಸನದ 45 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ
42. ರೋಗಿ-904: ಹಾಸನದ 4 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ


ಫಸ್ಟ್ ನ್ಯೂರೋ ಲಿಂಕ್ : ಉಡುಪಿ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢ


ಮಂಗಳೂರು-ಪಡೀಲ್ ಬಳಿಯ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಜಿಲ್ಲೆ ಮೂಲದ ಇಬ್ಬರಿಗೆ ಇಂದು ಸೋಂಕು ದೃಢಪಟ್ಟ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಉಡುಪಿ ಜಿಲ್ಲೆಯ 50 ವರ್ಷದ ಮಹಿಳೆ ಹಾಗೂ 26 ವರ್ಷದ ಪುರುಷನಿಗೆ ಇಂದು ಕೋವಿಡ್-19 ಸೋಂಕು ದೃಢವಾಗಿದೆ ಎಂದು ಇಲಾಖೆ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ಇಂದು ತಿಳಿಸಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಈ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ರೋಗಿ ಸಂಖ್ಯೆ ಪಿ-507 ರಿಂದ ಸೋಂಕು ಹರಡಿದೆ ಎನ್ನಲಾಗಿದೆ. ಫಸ್ಟ್ ನ್ಯೂರೋ ಕೊರೋನಾ ಹಾಟ್‍ಸ್ಪಾಟ್ ಆದ ಬಳಿಕ ಇವರನ್ನು ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಇವರ ಗಂಟಲ ದ್ರವ ಮಾದರಿಯ ವರದಿ ಬಂದಿದ್ದು, ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ. ಇಬ್ಬರೂ ಕೂಡಾ ಜಿಲ್ಲೆಯ ಕಾರ್ಕಳ ತಾಲೂಕಿನ ನಿವಾಸಿಗಳು ಎನ್ನಲಾಗಿದೆ. 
  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಇಂದು 42 ಮಂದಿ ಸೋಂಕು ದೃಢ : ಸೋಂಕಿತರ ಸಂಖ್ಯೆ 904ಕ್ಕೇರಿಕೆ Rating: 5 Reviewed By: karavali Times
Scroll to Top