ಭಾನುವಾರ ಸಂಪೂರ್ಣ ಲಾಕ್‍ಡೌನ್ ಇದ್ದರೂ ವಿವಾಹ ಕಾರ್ಯಕ್ರಮ ನಿರಾತಂಕ : ರಾಜ್ಯ ಸರಕಾರದಿಂದ ಆದೇಶ - Karavali Times ಭಾನುವಾರ ಸಂಪೂರ್ಣ ಲಾಕ್‍ಡೌನ್ ಇದ್ದರೂ ವಿವಾಹ ಕಾರ್ಯಕ್ರಮ ನಿರಾತಂಕ : ರಾಜ್ಯ ಸರಕಾರದಿಂದ ಆದೇಶ - Karavali Times

728x90

21 May 2020

ಭಾನುವಾರ ಸಂಪೂರ್ಣ ಲಾಕ್‍ಡೌನ್ ಇದ್ದರೂ ವಿವಾಹ ಕಾರ್ಯಕ್ರಮ ನಿರಾತಂಕ : ರಾಜ್ಯ ಸರಕಾರದಿಂದ ಆದೇಶ



ಬೆಂಗಳೂರು (ಕರಾವಳಿ ಟೈಮ್ಸ್) : ಮುಂದಿನ ದಿನಗಳಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್‍ಡೌನ್ ಎಂದು ಸರಕಾರ ಈ ಹಿಂದೆ ಘೋಷಿಸಿದ್ದರೂ ಇದೀಗ ತನ್ನ ಅದೇಶದಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದ್ದು, ಮದುವೆ ಸಮಾರಂಭಗಳಿಗೆ ವಿನಾಯಿತಿ ನೀಡಿ ಮರು ಆದೇಶ ಹೊರಡಿಸಿದೆ. ಇದರಿಂದಾಗಿ ವಿವಾಹ ಸಮಾರಂಭಕ್ಕಾಗಿ ದಿನ ನಿಗದಿ ಮಾಡಿಕೊಂಡವರು ರಿಲ್ಯಾಕ್ಸ್ ಆಗಿದ್ದಾರೆ.

    ಭಾನುವಾರ ಬೇರೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿದ್ದರೂ ಈಗಾಗಲೇ ನಿಶ್ಚಯವಾಗಿರುವ ವಿವಾಹ ಕಾರ್ಯಕ್ರಮಗಳನ್ನು ನಡೆಸಲು ಅಡ್ಡಿ ಇಲ್ಲ ಎಂದು ಸರಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದು ವಿವಾಹ ಸಮಾರಂಭಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಮತಿಸಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡು 50 ಮಂದಿಯ ಗರಿಷ್ಠ ಉಪಸ್ಥಿತಿಯಲ್ಲಿ ವಿವಾಹ ನೆರವೇರಿಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
  • Blogger Comments
  • Facebook Comments

0 comments:

Post a comment

Item Reviewed: ಭಾನುವಾರ ಸಂಪೂರ್ಣ ಲಾಕ್‍ಡೌನ್ ಇದ್ದರೂ ವಿವಾಹ ಕಾರ್ಯಕ್ರಮ ನಿರಾತಂಕ : ರಾಜ್ಯ ಸರಕಾರದಿಂದ ಆದೇಶ Rating: 5 Reviewed By: karavali Times
Scroll to Top