ಮಾರ್ಗಸೂಚಿಗೆ ಬದ್ದವಾಗಿ ಸಾರ್ವಜನಿಕ ಚಟುವಟಿಕೆ ಪ್ರಾರಂಭಿಸಿ : ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಕರೆ - Karavali Times ಮಾರ್ಗಸೂಚಿಗೆ ಬದ್ದವಾಗಿ ಸಾರ್ವಜನಿಕ ಚಟುವಟಿಕೆ ಪ್ರಾರಂಭಿಸಿ : ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಕರೆ - Karavali Times

728x90

11 May 2020

ಮಾರ್ಗಸೂಚಿಗೆ ಬದ್ದವಾಗಿ ಸಾರ್ವಜನಿಕ ಚಟುವಟಿಕೆ ಪ್ರಾರಂಭಿಸಿ : ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಕರೆ



ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ತಡೆಗೆ ವಿಧಿಸಲಾಗಿರುವ ಮೂರನೇ ಹಂತದ ಲಾಕ್ ಡೌನ್ ಮೇ.17 ಕ್ಕೆ ಮುಕ್ತಾಯಗೊಳ್ಳಲಿದ್ದು, ಮೇ.15 ವೇಳೆಗೆ ಲಾಕ್ ಡೌನ್ ನಿಂದ ಹೊರಗೆ ಬರುವ ಕಾರ್ಯತಂತ್ರದ ಬಗ್ಗೆ ಸಲಹೆಗಳನ್ನು ಹಂಚಿಕೊಳ್ಳುವಂತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಮೇ.11 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ 6 ಗಂಟೆಗೂ ಹೆಚ್ಚು ಕಾಲ ನಡೆಸಿದ ಸುದೀರ್ಘ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳಿಗೆ ಈ ಸಲಹೆ ನೀಡಿದ್ದಾರೆ. 

ಮೊದಲ ಹಂತದ ಲಾಕ್ ಡೌನ್ ನಲ್ಲಿ ಕೈಗೊಂಡ ಕ್ರಮಗಳು ಎರಡನೇ ಹಂತದ ಲಾಕ್ ಡೌನ್ ನಲ್ಲಿ ಅಗತ್ಯವಿರಲಿಲ್ಲ, ಎರಡನೇ ಹಂತದ ಲಾಕ್ ಡೌನ್ ನಲ್ಲಿ ಕೈಗೊಂಡ ಕ್ರಮಗಳು ಮೂರನೇ ಹಂತದಲ್ಲಿ ಅಗತ್ಯವಿರಲಿಲ್ಲ. ಈಗ ನಮ್ಮ ಗಮನ ಕೊರೋನಾ ಹರಡುವಿಕೆ ಪ್ರಮಾಣ ಇಳಿಕೆ ಮಾಡುವುದರ ಜೊತೆಯಲ್ಲಿ, ಮಾರ್ಗಸೂಚಿಗಳಿಗೆ ಬದ್ಧವಾಗಿದ್ದುಕೊಂಡೇ ಕ್ರಮೇಣ ಸಾರ್ವಜನಿಕ ಚಟುವಟಿಕೆಗಳನ್ನು ಪ್ರಾರಂಭಿಸುವುದರತ್ತ ಇರಬೇಕೆಂದು ಮೋದಿ ಹೇಳಿದ್ದಾರೆ. 
ಇದೇ ವೇಳೆ ಆರ್ಥಿಕತೆ ಪುನಶ್ಚೇತನವಾಗಬೇಕಿದ್ದು, ಮೇ.15 ರ ವೇಳೆಗೆ ಲಾಕ್ ಡೌನ್ ಎಕ್ಸಿಟ್ ಕಾರ್ಯತಂತ್ರ ರೂಪಿಸಿ ಸಲಹೆಗಳನ್ನು ಹಂಚಿಕೊಳ್ಳಬೇಕೆಂದು ಮೋದಿ ಸಲಹೆ ನೀಡಿದ್ದಾರೆ. 
ಇದೇ ವೇಳೆ ರೈಲು ಸೇವೆಗಳನ್ನು ಪ್ರಾರಂಭಿಸುವುದು ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಅಗತ್ಯವಾಗಿದ್ದು, ಎಲ್ಲಾ ಪ್ರದೇಶಗಳಿಗೂ ರೈಲು ಸಂಚಾರ ಸೌಲಭ್ಯ ಇರುವುದಿಲ್ಲ ನಿಗದಿತ ಪ್ರದೇಶಗಳಿಗೆ ಮಾತ್ರ ಇದು ಸೀಮಿತವಾಗಿರಲಿದೆ ಎಂದು ಮೋದಿ ಹೇಳಿದ್ದಾರೆ. 
ನಮ್ಮ ಮುಂದೆ ಈಗ ಎರಡು ಹಂತದ ಸವಾಲುಗಳಿವೆ ಒಂದು ಹರಡುವಿಕೆ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತೊಂದು ಮಾರ್ಗಸೂಚಿಗಳಿಗೆ ಬದ್ಧವಾಗಿದ್ದುಕೊಂಡೇ ಕ್ರಮೇಣ ಸಾರ್ವಜನಿಕ ಚಟುವಟಿಕೆಗಳನ್ನು ಪ್ರಾರಂಭಿಸುವುದು, ಈ ಎರಡೂ ಅಂಶಗಳನ್ನು ಸಾಧಿಸುವುದರತ್ತ ನಾವು ಕೆಲಸ ಮಾಡಬೇಕಿದೆ ಎಂದು ಮೋದಿ ಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಮಾರ್ಗಸೂಚಿಗೆ ಬದ್ದವಾಗಿ ಸಾರ್ವಜನಿಕ ಚಟುವಟಿಕೆ ಪ್ರಾರಂಭಿಸಿ : ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಕರೆ Rating: 5 Reviewed By: karavali Times
Scroll to Top