ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳು ಓಪನ್ : ಕೇಂದ್ರ ಸರಕಾರದಿಂದ ಹೊಸ ಮಾರ್ಗ ಸೂಚಿ ರಿಲೀಸ್ - Karavali Times ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳು ಓಪನ್ : ಕೇಂದ್ರ ಸರಕಾರದಿಂದ ಹೊಸ ಮಾರ್ಗ ಸೂಚಿ ರಿಲೀಸ್ - Karavali Times

728x90

4 June 2020

ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳು ಓಪನ್ : ಕೇಂದ್ರ ಸರಕಾರದಿಂದ ಹೊಸ ಮಾರ್ಗ ಸೂಚಿ ರಿಲೀಸ್ನವದೆಹಲಿ (ಕರಾವಳಿ ಟೈಮ್ಸ್) : ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಕೇಂದ್ರ ಸರಕಾರ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕಂಟೈನ್ಮೆಂಟ್ ಝೋನ್‍ ಹೊರತುಪಡಿಸಿ ಉಳಿದೆಲ್ಲಾ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಕೇಂದ್ರದ ಮಾರ್ಗಸೂಚಿಯಂತೆ ಧಾರ್ಮಿಕ ಕ್ಷೇತಗಳಲ್ಲಿ ಪ್ರಸಾದ, ತೀರ್ಥ ನೀಡುವಂತಿಲ್ಲ. 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳನ್ನು ಧಾರ್ಮಿಕ ಕೇಂದ್ರಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಫೇಸ್ ಕವರ್ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ ಬದಲಾಗಿ, ವೈಯಕ್ತಿಕ ಪೂಜೆಗಳಿಗೆ ಆದ್ಯತೆ ನೀಡುವಂತೆ ತಾಕೀತು ಮಾಡಲಾಗಿದೆ.

ಧಾರ್ಮಿಕ ಕ್ಷೇತ್ರವನ್ನು ನಿಯಮಿತವಾಗಿ ಸ್ವಚ್ಛ ಮಾಡುವುದು, ನಿಯಮಿತವಾಗಿ ಕೈ ಸ್ಯಾನಿಟೈಸ್ ಅಥವಾ ಸಾಬೂನಿಂದ ಕೈ ತೊಳೆದುಕೊಳ್ಳಲು ತಿಳಿಸಲಾಗಿದೆ. ಕೆಮ್ಮುವಾಗ ಅಥವಾ ಸೀನುವಾಗ ಟಿಶು, ಕರವಸ್ತ್ರ ಬಳಸಿದ ಬಳಿಕ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಧಾರ್ಮಿಕ ಕೇಂದ್ರ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮತ್ತು ಕೈ ಸ್ವಚ್ಛ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ರೋಗದ ಗುಣ ಲಕ್ಷಣಗಳು ಇಲ್ಲದವರಿಗೆ ಮಾತ್ರ ಪ್ರವೇಶ ನೀಡಲು ಸೂಚನೆ ನೀಡಲಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಕೊರೊನಾ ಮುನ್ನೆಚ್ಚರಿಕೆಗಳ ಬಗ್ಗೆ ಭಿತ್ತಿ ಪತ್ರ ಪೋಸ್ಟರ್ ಪ್ರದರ್ಶನ ಮಾಡುವುದು. ವಿಡಿಯೋ, ಆಡಿಯೋಗಳನ್ನು ಪ್ಲೇ ಮಾಡುವುದು ಕಡ್ಡಾಯ ಮಾಡಲಾಗಿದೆ. ಸಮಯದ ಆಧಾರದಲ್ಲಿ ಶಿಫ್ಟ್ ಗಳನ್ನು ಮಾಡಲು ತಿಳಿಸಿದೆ. ಅಲ್ಲದೇ ಶೂ ಚಪ್ಪಲಿಗಳನ್ನು ಭಕ್ತರು ವಾಹನದಲ್ಲಿ ಇಟ್ಟು ಬರಬೇಕು. ಧಾರ್ಮಿಕ ಕ್ಷೇತ್ರದ ಒಳಗೆ ಪಾದರಕ್ಷೆಗಳನ್ನು ಕೊಂಡೊಯ್ಯುವಂತಿಲ್ಲ. ಅನಿವಾರ್ಯವಾದರೆ ಚಪ್ಪಲಿಗಳನ್ನು ಪ್ರತ್ಯೇಕಿಸಿ ಇಡಬೇಕು ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.

ಧಾರ್ಮಿಕ ಕ್ಷೇತ್ರದೊಳಗೆ ಸಾಮಾಜಿಕ ಅಂತರಕ್ಕೆ ಸೂಕ್ತ ಮಾರ್ಕ್ ಮಾಡುವುದು. ಧಾರ್ಮಿಕ ಕೇಂದ್ರದ ಆವರಣದೊಳಗಿನ ಅಂಗಡಿಗಳು, ಹೋಟೆಲ್, ಪಾರ್ಕಿಂಗ್ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಧಾರ್ಮಿಕ ಸ್ಥಳಗಳ ಪ್ರವೇಶ ಮತ್ತು ನಿರ್ಗಮನ ಪ್ರತ್ಯೇಕವಾಗಿಡಬೇಕು. ಯಾವುದೇ ಸ್ಥಳದಲ್ಲಿ ಎಸಿಗಳ ಬಳಕೆ ಬಿಟ್ಟು ನೈಸರ್ಗಿಕ ಗಾಳಿಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಸರಕಾರ ಹೊರಡಿಸಿ ಹೊಸ ಮಾರ್ಗ ಸೂಚಿಯಲ್ಲಿ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳು ಓಪನ್ : ಕೇಂದ್ರ ಸರಕಾರದಿಂದ ಹೊಸ ಮಾರ್ಗ ಸೂಚಿ ರಿಲೀಸ್ Rating: 5 Reviewed By: karavali Times
Scroll to Top