ಸೆ. 19 ರಿಂದ ನ. 8 ರವರೆಗೆ ಐಪಿಎಲ್ ಟೂರ್ನಿ : ಬ್ರಿಜೇಶ್ ಪಟೇಲ್ - Karavali Times ಸೆ. 19 ರಿಂದ ನ. 8 ರವರೆಗೆ ಐಪಿಎಲ್ ಟೂರ್ನಿ : ಬ್ರಿಜೇಶ್ ಪಟೇಲ್ - Karavali Times

728x90

24 July 2020

ಸೆ. 19 ರಿಂದ ನ. 8 ರವರೆಗೆ ಐಪಿಎಲ್ ಟೂರ್ನಿ : ಬ್ರಿಜೇಶ್ ಪಟೇಲ್



ಈ ಬಾರಿ ಟೂರ್ನಿಗೆ ಯುಎಇ ಆತಿಥ್ಯ


ನವದೆಹಲಿ (ಕರಾವಳಿ ಟೈಮ್ಸ್) : ಬಹು ನಿರೀಕ್ಷಿತ 2020ರ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದ್ದು, ನವೆಂಬರ್ 8 ರವರೆಗೆ ನಡೆಯಲಿದೆ ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಘೋಷಿಸಿದ್ದಾರೆ. ಟೂರ್ನಿಯ ಕುರಿತ ಅಂತಿಮ ವಿವರಗಳನ್ನು ಹಾಗೂ ವೇಳಾಪಟ್ಟಿಯನ್ನು ಅನುಮೋದಿಸಲು ಮುಂದಿನ ವಾರ ಆಡಳಿತ ಮಂಡಳಿ ಸಭೆ ನಡೆಸಲಾಗುತ್ತದೆ. ಬಿಸಿಸಿಐ ಟೂರ್ನಿ ಯೋಜನೆಯ ಬಗ್ಗೆ ಅನೌಪಚಾರಿಕವಾಗಿ ಈಗಾಗಲೇ ಐಪಿಎಲ್ ಫ್ರಾಂಚೈಸಿಗಳಿಗೆ ತಿಳಿಸಿದೆ ಎನ್ನಲಾಗಿದೆ. 

ಶೀಘ್ರವೇ ಆಡಳಿತ ಸಮಿತಿ ಸಭೆ ಕರೆದು ವೇಳಾಪಟ್ಟಿಯನ್ನು ಫೈನಲ್ ಮಾಡಲಾಗುವುದು. ಟೂರ್ನಿ ಸೆ. 19 ರಿಂದ ನ. 8ರವರೆಗೂ ನಡೆಯಲಿದೆ. ಸರ್ಕಾರ ಅನುಮತಿಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಕಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ ಎಂದು ಬ್ರಿಜೇಶ್ ಪಟೇಲ್ ಮಾಧ್ಯಮಗಳಿಗೆ  ತಿಳಿಸಿದ್ದಾರೆ.

ಐಸಿಸಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಅವಧಿಯಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಟೂರ್ನಿಯನ್ನು ಮುಂದೂಡಿದ ವೇಳೆಯೇ ಐಪಿಎಲ್ ಟೂರ್ನಿ ನಡೆಯುವುದು ಖಚಿತವಾಗಿತ್ತು. ಭಾರತದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟೂರ್ನಿ ಯುಎಇನಲ್ಲಿ ನಡೆಯಲಿದೆ. ಉಳಿದಂತೆ ಟೂರ್ನಿಯಲ್ಲಿ 5 ಡಬಲ್ ಶೆಡ್ಯೂಲ್ ಪಂದ್ಯಗಳು ಮಾತ್ರ ನಡೆಯುವ ಅವಕಾಶವಿದೆ.








  • Blogger Comments
  • Facebook Comments

0 comments:

Post a Comment

Item Reviewed: ಸೆ. 19 ರಿಂದ ನ. 8 ರವರೆಗೆ ಐಪಿಎಲ್ ಟೂರ್ನಿ : ಬ್ರಿಜೇಶ್ ಪಟೇಲ್ Rating: 5 Reviewed By: karavali Times
Scroll to Top