ಸ್ವಪಕ್ಷೀಯ ನಿರ್ದೇಶಕನ ಅಡ್ಡ ಮತದಾನ : ಬಹುಮತ ಇದ್ದರೂ ಶಿವಮೊಗ್ಗ ಎಪಿಎಂಸಿ ಅಧಿಕಾರ ಕಳೆದುಕೊಂಡ ಬಿಜೆಪಿ - Karavali Times ಸ್ವಪಕ್ಷೀಯ ನಿರ್ದೇಶಕನ ಅಡ್ಡ ಮತದಾನ : ಬಹುಮತ ಇದ್ದರೂ ಶಿವಮೊಗ್ಗ ಎಪಿಎಂಸಿ ಅಧಿಕಾರ ಕಳೆದುಕೊಂಡ ಬಿಜೆಪಿ - Karavali Times

728x90

1 July 2020

ಸ್ವಪಕ್ಷೀಯ ನಿರ್ದೇಶಕನ ಅಡ್ಡ ಮತದಾನ : ಬಹುಮತ ಇದ್ದರೂ ಶಿವಮೊಗ್ಗ ಎಪಿಎಂಸಿ ಅಧಿಕಾರ ಕಳೆದುಕೊಂಡ ಬಿಜೆಪಿ



ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸಿ.ಎಂ. ಹಾಗೂ ಬಿಜೆಪಿಗೆ ಭಾರೀ ಮುಖಭಂಗ


ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಪಟ್ಟ ಜೆಡಿಎಸ್ ಪಾಲಿಗೆ


ಶಿವಮೊಗ್ಗ (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲೆಯಾಗಿರುವ ಶಿವಮೊಗ್ಗ  ಎಪಿಎಂಸಿಯಲ್ಲಿ ಬಿಜೆಪಿ ಬಹುಮತವಿದ್ದರೂ ಸ್ವಪಕ್ಷದ ಸದಸ್ಯರೋರ್ವರ ಅಡ್ಡ ಮತದಾನದಿಂದ ಬಿಜೆಪಿ ಅಧಿಕಾರದ ಹೊಸ್ತಿಲಲ್ಲಿ ಮುಗ್ಗರಿಸಿದೆ. ಪರಿಣಾಮ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಎರಡೂ ಕೂಡಾ ಜೆಡಿಎಸ್ ಪಾಲಾಗುವ ಮೂಲಕ ಬಿಜೆಪಿ ಹಾಗೂ ಮುಖ್ಯಮಂತ್ರಿ ಭಾರೀ ಮುಖಭಂಗ ಅನುಭವಿಸುವಂತಾಗಿದೆ.

ಶಿವಮೊಗ್ಗ ಎಪಿಎಂಸಿಗೆ ಕೊನೆಯ 20 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬುಧವಾರ ನಡೆಯಿತು. ಈ ಹಿಂದೆ ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿತ್ತು.

 ಕೊನೆಯ ಅವಧಿಯಲ್ಲಿ ಅಧಿಕಾರ ಹಿಡಿಯಲು ಬೇಕಾದಷ್ಟು ಬಹುತಮ ಬಿಜೆಪಿ ಬಳಿ ಇದ್ದುದರಿಂದ ಬಿಜೆಪಿ ಸುಲಭವಾಗಿ ಅಧಿಕಾರ ಪಡೆಯುತ್ತದೆ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. 

ಬಿಜೆಪಿ 6 ನಿರ್ದೇಶಕರ ಜೊತೆಗೆ 3 ಮಂದಿ ನಾಮ ನಿರ್ದೇಶಕರು ಸೇರಿ 9 ನಿರ್ದೇಶಕರನ್ನು ಹೊಂದಿದ್ದರೆ, ಜೆಡಿಎಸ್ 4, ಕಾಂಗ್ರೆಸ್ 3 ಹಾಗೂ ಪಕ್ಷೇತರ ನಿರ್ದೇಶಕರು 1 ಸ್ಥಾನ ಸೇರಿದರೂ 8 ಮಂದಿ ಮಾತ್ರ ಇದ್ದರು. 9 ಸ್ಥಾನ ಹೊಂದಿದ್ದ ಬಿಜೆಪಿ ಸುಲಭವಾಗಿ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ನಿಚ್ಚಳವಾಗಿತ್ತು. ಆದರೆ ಬಿಜೆಪಿಯ ಸದಸ್ಯರೊಬ್ಬರೇ ಅಡ್ಡ ಮತದಾನ ಮಾಡಿದ ಪರಿಣಾಮ ಬಿಜೆಪಿ ಅಧಿಕಾರ ಕಳೆದು ಕೈ ಕೈ ಹಿಸುಕಿಕೊಳ್ಳುವಂತಾಯಿತು.

ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಬಿಜೆಪಿ ಮುಖಭಂಗ ಅನುಭವಿಸುವಂತಾಗಿದೆ.

 ಕೊನೆಗೂ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷರಾಗಿ ಜೆಡಿಎಸ್‍ ಪಕ್ಷದ ದುಗ್ಗಪ್ಪಗೌಡ ಹಾಗೂ ಉಪಾಧ್ಯಕ್ಷರಾಗಿ ಬಾಬಣ್ಣ ಆಯ್ಕೆಯಾಗಿದ್ದಾರೆ.












  • Blogger Comments
  • Facebook Comments

0 comments:

Post a comment

Item Reviewed: ಸ್ವಪಕ್ಷೀಯ ನಿರ್ದೇಶಕನ ಅಡ್ಡ ಮತದಾನ : ಬಹುಮತ ಇದ್ದರೂ ಶಿವಮೊಗ್ಗ ಎಪಿಎಂಸಿ ಅಧಿಕಾರ ಕಳೆದುಕೊಂಡ ಬಿಜೆಪಿ Rating: 5 Reviewed By: karavali Times
Scroll to Top