ಕೆ.ಸಿ.ರೋಡು ಮಸೀದಿ ಅಧ್ಯಕ್ಷ ಪಿ.ಬಿ. ಬಶೀರ್ ನಿಧನ - Karavali Times ಕೆ.ಸಿ.ರೋಡು ಮಸೀದಿ ಅಧ್ಯಕ್ಷ ಪಿ.ಬಿ. ಬಶೀರ್ ನಿಧನ - Karavali Times

728x90

22 July 2020

ಕೆ.ಸಿ.ರೋಡು ಮಸೀದಿ ಅಧ್ಯಕ್ಷ ಪಿ.ಬಿ. ಬಶೀರ್ ನಿಧನ



ಬಂಟ್ವಾಳ (ಕರಾವಳಿ ಟೈಮ್ಸ್) : ಕಲ್ಲಡ್ಕ ಸಮೀಪದ ಕೆ.ಸಿ.ರೋಡ್  ನಿವಾಸಿ, ಪಿ.ಡಬ್ಲ್ಯೂ.ಡಿ. ಕಂಟ್ರಾಕ್ಟರ್ ಪಿ.ಬಿ. ಬಶೀರ್ (53) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ನಿಧನರಾದರು.

     ಕೆ.ಸಿ.ರೋಡಿನ ಇಬ್ರಾಹಿಂ ಆಯಿಷಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕಲ್ಲಡ್ಕ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

   ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದ ಅವರು ಜನಾನುರಾಗಿಯಾಗಿದ್ದರು.

   ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ವಾರದ ಹಿಂದೆ ನ್ಯುಮೋನಿಯ ಜ್ವರ ಕಾರಣದಿಂದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಬುಧವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ಕೆ.ಸಿ.ರೋಡು ಮಸೀದಿ ಅಧ್ಯಕ್ಷ ಪಿ.ಬಿ. ಬಶೀರ್ ನಿಧನ Rating: 5 Reviewed By: karavali Times
Scroll to Top