ತುಂಬೆ : ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿಯ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ತುಂಬೆ : ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿಯ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

14 July 2020

ತುಂಬೆ : ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿಯ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲು



ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಗ್ರಾಮದ ಕಾಣೆಮಾರ್ ನಿವಾಸಿ ಸಾಹಿದ್ (32) ಎಂಬಾತನಿಗೆ ಜುಲೈ 9 ರಿಂದ 23 ರವರೆಗೆ ಹೋಂ ಕ್ವಾರಂಟೈನ್ ಆಗಿರುವಂತೆ ತುಂಬೆ ಗ್ರಾ ಪಂ ಅಧಿಕಾರಿಗಳು ಸೂಚಿಸಿದ್ದು, ಪಂಚಾಯತ್ ನೋಟಿಸು ಕೂಡ ಜ್ಯಾರಿ ಮಾಡಿರುತ್ತದೆ.

ಆದರೆ ಈತ ಜುಲೈ  ದಿನಾಂಕ 14 ರಂದು ಠಾಣಾ ಸಿಬ್ಬಂದಿ ಪರಿಶೀಲನೆ ನಡೆಸುವ ವೇಳೆ ಮನೆಯಲ್ಲಿ ಇರದೆ ಹೋಂ‌ ಕ್ವಾರಂಟೈನ್ ಉಲ್ಲಂಘಿಸಿರುವುದು ಕಂಡು ಬಂದಿರುತ್ತದೆ. ಈತ ಸರಕಾರದ ಕ್ವಾರಂಟೈನ್ ನಿಯಮ‌ ಉಲ್ಲಂಘಿಸಿ ಮನೆಯಿಂದ ಹೊರಗೆ ತೆರಳಿದ್ದು, ಇತರರೆಡೆಯಲ್ಲಿ ತಿರುಗಾಡುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಈತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ : 269, 270,  271 ಐಪಿಸಿ  ಮತ್ತು ಕಲಂ 5(1) ಕರ್ನಾಟಕ  ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಕಾಯ್ದೆ  2020 ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.









  • Blogger Comments
  • Facebook Comments

0 comments:

Post a comment

Item Reviewed: ತುಂಬೆ : ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿಯ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top