ಎಸ್‍ಎಸ್‍ಎಲ್‍ಸಿ ಫಲಿತಾಂಶ ದಿನ ಇನ್ನೂ ನಿಗದಿಯಾಗಿಲ್ಲ : ಸಚಿವ ಸುರೇಶ್ ಕುಮಾರ್ - Karavali Times ಎಸ್‍ಎಸ್‍ಎಲ್‍ಸಿ ಫಲಿತಾಂಶ ದಿನ ಇನ್ನೂ ನಿಗದಿಯಾಗಿಲ್ಲ : ಸಚಿವ ಸುರೇಶ್ ಕುಮಾರ್ - Karavali Times

728x90

6 August 2020

ಎಸ್‍ಎಸ್‍ಎಲ್‍ಸಿ ಫಲಿತಾಂಶ ದಿನ ಇನ್ನೂ ನಿಗದಿಯಾಗಿಲ್ಲ : ಸಚಿವ ಸುರೇಶ್ ಕುಮಾರ್



ನಾಳೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುದ್ದಿ ಸತ್ಯಕ್ಕೆ ದೂರ

ಬೆಂಗಳೂರು (ಕರಾವಳಿ ಟೈಮ್ಸ್) : ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದ ದಿನಾಂಕ ಇನ್ನೂ ಅಂತಿಮವಾಗಿಲ್ಲ. ನಾಳೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಸಚಿವರು, ನಾಳೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ ಎಂಬ ಸುದ್ದಿ ಸತ್ಯವಲ್ಲ. ಈ ಬಗ್ಗೆ ಇನ್ನೂ ದಿನಾಂಕ ನಿಶ್ಚಯವಾಗಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್ ವ್ಯಾಪಕವಾಗಿದ್ದ ಮಧ್ಯೆ ಸರಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಿತ್ತು. ವಿದ್ಯಾರ್ಥಿಗಳ  ಧೈರ್ಯವಾಗಿ ಪರೀಕ್ಷೆ ಎದುರಿಸಿದ್ದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ದಿನಾಂಕವನ್ನು ಇನ್ನೂ ಅಂತಿಮಪಡಿಸಿಲ್ಲ ಎಂದು ಈ ಕುರಿತು ಸ್ವತಃ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.






  • Blogger Comments
  • Facebook Comments

0 comments:

Post a Comment

Item Reviewed: ಎಸ್‍ಎಸ್‍ಎಲ್‍ಸಿ ಫಲಿತಾಂಶ ದಿನ ಇನ್ನೂ ನಿಗದಿಯಾಗಿಲ್ಲ : ಸಚಿವ ಸುರೇಶ್ ಕುಮಾರ್ Rating: 5 Reviewed By: karavali Times
Scroll to Top