ಸುಳ್ಯ : ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಮುಂಜಾನೆ ಹೊರಟವ ಬೈಕ್ ಸಹಿತ ಸುಟ್ಟು ಭಸ್ಮ! - Karavali Times ಸುಳ್ಯ : ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಮುಂಜಾನೆ ಹೊರಟವ ಬೈಕ್ ಸಹಿತ ಸುಟ್ಟು ಭಸ್ಮ! - Karavali Times

728x90

11 August 2020

ಸುಳ್ಯ : ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಮುಂಜಾನೆ ಹೊರಟವ ಬೈಕ್ ಸಹಿತ ಸುಟ್ಟು ಭಸ್ಮ!

 

ಸುಳ್ಯ (ಕರಾವಳಿ ಟೈಮ್ಸ್) : ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಗಮನಿಸದ ಪರಿಣಾಮ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿ ಬೈಕ್ ಸಹಿತ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಪಡ್ಪಿನಂಗಡಿ ಬಳಿ  ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

 ಮೃತ ವ್ಯಕ್ತಿಯನ್ನು ಸುಳ್ಯ ಸಮೀಪದ ಮಂಡೆಕೋಲು ನಿವಾಸಿ ಉಮೇಶ್ ಎಂದು ಹೆಸರಿಸಲಾಗಿದೆ.


  ಉಮೇಶ್ ಅವರು ಬಳ್ಪದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು, ಇಂದು ಬೆಳಗ್ಗೆ ಹಾಲು ಕರೆಯಲು ಇದೆ ಎಂದು ಅಲ್ಲಿಂದ ಮುಂಜಾನೆ 4.30ರ ಸುಮಾರಿಗೆ ಹೊರಟಿದ್ದಾರೆ. ಹೀಗೆ ಹೊರಟ ಉಮೇಶ್ ಅವರು ಕಂಬದಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ವಿದ್ಯುತ್ ತಂತಿಯನ್ನು ಗಮನಿಸದೆ ಈ ಅವಘಡ  ಸಂಭವಿಸಿದೆ ಎನ್ನಲಾಗಿದೆ.

ವಿದ್ಯುತ್ ತಂತಿಯ ಮೇಲೆಯೇ ಬೈಕ್ ಚಲಾಯಿಸಿದ ಪರಿಣಾಮ ಬೈಕಿಗೆ ವಿದ್ಯುತ್ ಪ್ರವಹಿಸಿ ಸವಾರ ಸಜೀವ ದಹನವಾಗಿದ್ದಾರೆ ಎನ್ನಲಾಗಿದ್ದು, ಮುಂಜಾನೆ 5 ಗಂಟೆ ಸುಮಾರಿಗೆ ಘಟನೆ  ನಡೆದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. 

ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಸುಳ್ಯ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಮುಂಜಾನೆ ಹೊರಟವ ಬೈಕ್ ಸಹಿತ ಸುಟ್ಟು ಭಸ್ಮ! Rating: 5 Reviewed By: karavali Times
Scroll to Top