ಐಪಿಎಲ್ ಇತಿಹಾಸದಲ್ಲೇ ಕರಾಳ ಅಧ್ಯಾಯ ಬರೆದ ಸಿ.ಎಸ್.ಕೆ. - Karavali Times ಐಪಿಎಲ್ ಇತಿಹಾಸದಲ್ಲೇ ಕರಾಳ ಅಧ್ಯಾಯ ಬರೆದ ಸಿ.ಎಸ್.ಕೆ. - Karavali Times

728x90

23 October 2020

ಐಪಿಎಲ್ ಇತಿಹಾಸದಲ್ಲೇ ಕರಾಳ ಅಧ್ಯಾಯ ಬರೆದ ಸಿ.ಎಸ್.ಕೆ.

 


ಕಡಿಮೆ ಮೊತ್ತಕ್ಕೆ ಕುಸಿದ ಚೆನ್ನೈ : ವಿಕೆಟ್ ಕಳಕೊಳ್ಳದೆ ಚೇಸ್ ಮಾಡಿದ ಮುಂಬೈ 


ಶಾರ್ಜಾ, ಅ. 25, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಐಪಿಎಲ್-2020 ರ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನಿಂದಾಗಿ ಚೆನ್ನೈ ಟೂರ್ನಿಯಿಂದ ಬಹುತೇಕ ಔಟ್ ಆಗಿದ್ದು, ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚೆನ್ನೈ ಲೀಗ್ ಹಂತದಲ್ಲೇ ಹೊರಬೀಳುತ್ತಿದೆ.

 ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ, ಮುಂಬೈ ವೇಗಿಗಳ ಮಾರಕ ದಾಳಿಗೆ ಸಂಪೂರ್ಣ ಕುಸಿಯಿತು. ಸ್ಯಾಮ್ ಕರ್ರನ್ ಅವರ ಅರ್ಧಶತಕದ ಹೊರತಾಗಿಯೂ ನಿಗದಿತ 20 ಓವರ್ ಗಳಲ್ಲಿ 115 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಅವರ ಉಪಯುಕ್ತ ಬ್ಯಾಟಿಂಗ್‍ನಿಂದ 7.4 ಓವರ್ ಇರುತ್ತಲೇ ಗೆಲುವು ಸಾಧಿಸಿತು.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದ್ದು, ಐಪಿಎಲ್-2020ಯಲ್ಲಿ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಅಪಖ್ಯಾತಿಗೂ ಚೆನ್ನೈ ಪಾತ್ರವಾಗುವ ಎಲ್ಲ ಸಾಧ್ಯತೆ ಕಂಡು ಬರುತ್ತಿದೆ. ಮೂರು ಬಾರಿ ಕಪ್ ಗೆದ್ದಿರುವ ಚೆನ್ನೈ ತಂಡ ಆಡಿರುವ 10 ಆವೃತ್ತಿಯಲ್ಲೂ ಪ್ಲೇ ಆಫ್ ಹಂತ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದೇ ಮೊದಲ ಬಾರಿಗೆ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗುವ ಸಾಧ್ಯತೆಯಿದೆ. ಅಲ್ಲದೆ ಫಿಕ್ಸಿಂಗ್ ಆರೋಪದ ಮೇಲೆ 2016 ಮತ್ತು 2017ರಲ್ಲಿ ಚೆನ್ನೈ ತಂಡ ಐಪಿಎಲ್‍ನಿಂದ ಬ್ಯಾನ್ ಆಗಿತ್ತು.

115 ರನ್‍ಗಳ ಸುಲಭ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಅವರು ಉತ್ತಮ ಆರಂಭ ನೀಡಿದರು. ಆರಂಭದಿಂದಲೇ ಚೆನ್ನೈ ವೇಗಿಗಳ ಮೇಲೆ ಸವಾರಿ ಮಾಡಿದ ಮುಂಬೈ ಓಪನರ್ ಗಳು ಪವರ್ ಪ್ಲೇ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೇ 52 ರನ್ ಸಿಡಿಸಿದರು. ಬಳಿಕ 62 ಎಸೆತಗಳಲ್ಲಿ 100 ರನ್ ಜೊತೆಯಾಟ ನಡೆಸಿದರು. ಇಶಾನ್ ಕಿಶಾನ್ ಅವರು ತಮ್ಮ ಅರ್ಧಶತಕ ಪೂರ್ಣಗೊಳಿಸಿದರು. ಕ್ವಿಂಟನ್ ಡಿ ಕಾಕ್ ಅವರು 37 ಎಸೆತಗಳಲ್ಲಿ 46 ರನ್ ಸಿಡಿಸಿದರು.







  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ ಇತಿಹಾಸದಲ್ಲೇ ಕರಾಳ ಅಧ್ಯಾಯ ಬರೆದ ಸಿ.ಎಸ್.ಕೆ. Rating: 5 Reviewed By: karavali Times
Scroll to Top