ಮುತ್ತಿನ ನಗರಿ ಹೈದರಾಬಾದ್ ಕೋಟೆಗೆ ಮುತ್ತಿಕ್ಕಿದ ಬಿಜೆಪಿ : 4 ರಿಂದ 49ಕ್ಕೇರಿದ ಕೇಸರಿ ಪಕ್ಷ - Karavali Times ಮುತ್ತಿನ ನಗರಿ ಹೈದರಾಬಾದ್ ಕೋಟೆಗೆ ಮುತ್ತಿಕ್ಕಿದ ಬಿಜೆಪಿ : 4 ರಿಂದ 49ಕ್ಕೇರಿದ ಕೇಸರಿ ಪಕ್ಷ - Karavali Times

728x90

4 December 2020

ಮುತ್ತಿನ ನಗರಿ ಹೈದರಾಬಾದ್ ಕೋಟೆಗೆ ಮುತ್ತಿಕ್ಕಿದ ಬಿಜೆಪಿ : 4 ರಿಂದ 49ಕ್ಕೇರಿದ ಕೇಸರಿ ಪಕ್ಷ

 


55 ಸ್ಥಾನದೊಂದಿಗೆ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದ ಟಿಆರ್‍ಎಸ್, ಒವೈಸಿ ಪಕ್ಷಕ್ಕೆ 44 ಸ್ಥಾನ


ಹೈದರಾಬಾದ್, ಡಿ. 05, 2020 (ಕರಾವಳಿ ಟೈಮ್ಸ್) : ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾಪೆರ್Çರೇಷನ್ (ಜಿಎಚ್‍ಎಂಸಿ) ಚುನಾವಣೆಯಲ್ಲಿ ಸಿಎಂ ಚಂದ್ರಶೇಖರ್ ರಾವ್ ಅವರ ಟಿಆರ್‍ಎಸ್ 55 ಸ್ಥಾನ ಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದರೆ, ಬಿಜೆಪಿ ಎರಡನೇ ಸ್ಥಾನದಲ್ಲಿದೆ.

    150 ವಾರ್ಡ್‍ಗಳ ಪೈಕಿ 49 ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಸಿಎಂ ಚಂದ್ರಶೇಖರ್ ರಾವ್ ಅವರ ಟಿಆರ್‍ಎಸ್ 55, ಅಸಾದುದ್ದೀನ್ ಒವೈಸಿಯ ಎಐಎಂಎಂ 44 ವಾರ್ಡ್‍ಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್ 2 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯೊಂದಿಗೆ ಬಿಜೆಪಿ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಳಿಕ ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ಮಾಡಿದ ಮೊದಲ ದೊಡ್ಡ ಪ್ರಯತ್ನ ಫಲ ನೀಡಿದೆ. ಅಷ್ಟೇ ಅಲ್ಲದೇ ಚಂದ್ರಶೇಖರ್ ರಾವ್ ಮತ್ತು ಓವೈಸಿ ಕಪಿಮುಷ್ಠಿಯಲ್ಲಿದ್ದ ಮುತ್ತಿನ ನಗರಿಗೆ ಬಿಜೆಪಿ ಲಗ್ಗೆ ಇಟ್ಟಿದೆ.

    2016 ರ ಚುನಾವಣೆಯಲ್ಲಿ ಟಿಆರ್‍ಎಸ್ 99, ಎಐಎಂಎಂ 44, ಕಾಂಗ್ರೆಸ್ 3 ಹಾಗೂ ಬಿಜೆಪಿ 4 ವಾರ್ಡ್‍ಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ, ಯುಪಿ ಸಿಎಂ ಆದಿತ್ಯನಾಥ್ ಸಹಿತ ಬಹುತೇಕ ಬಿಜೆಪಿ ರಾಷ್ಟ್ರೀಯ ನಾಯಕರು ಭರ್ಜರಿ ಪ್ರಚಾರ ಕೈಗೊಂಡಿದ್ದರು. ಪರಿಣಾಮ ಬಿಜೆಪಿ ಪಕ್ಷ ಸಂಘಟನೆ ಬಲಗೊಂಡಿದೆ.

    ಆಡಳಿತಾರೂಢ ಟಿಆರ್‍ಎಸ್, ಬಿಜೆಪಿ ಮತ್ತು ಅಸಾದುದ್ದೀನ್ ಒವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್ -ಎ-ಇತೇಹಾದುಲ್ ಮುಸ್ಲಿಮೀನ್ ಪಕ್ಷಗಳ ನಡುವೆ ತೀವ್ರ ಪೈಪೆÇೀಟಿ ಹೊಂದಿದ್ದ ನಗರಪಾಲಿಕೆ ಚುನಾವಣೆಯಲ್ಲಿ ಶೇ. 46.55 ರಷ್ಟು ಮತದಾರರು ಮತ ಚಲಾಯಿಸಿದ್ದರು.







  • Blogger Comments
  • Facebook Comments

0 comments:

Post a Comment

Item Reviewed: ಮುತ್ತಿನ ನಗರಿ ಹೈದರಾಬಾದ್ ಕೋಟೆಗೆ ಮುತ್ತಿಕ್ಕಿದ ಬಿಜೆಪಿ : 4 ರಿಂದ 49ಕ್ಕೇರಿದ ಕೇಸರಿ ಪಕ್ಷ Rating: 5 Reviewed By: karavali Times
Scroll to Top