ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾಗಿ ರಫೀಕ್ ಹಾಜಿ ನೇರಳಕಟ್ಟೆ ಆಯ್ಕೆ - Karavali Times ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾಗಿ ರಫೀಕ್ ಹಾಜಿ ನೇರಳಕಟ್ಟೆ ಆಯ್ಕೆ - Karavali Times

728x90

9 January 2021

ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾಗಿ ರಫೀಕ್ ಹಾಜಿ ನೇರಳಕಟ್ಟೆ ಆಯ್ಕೆ

ಬಂಟ್ವಾಳ, ಜ. 09, 2021 (ಕರಾವಳಿ ಟೈಮ್ಸ್) : ದೇಶದ ಅತ್ಯುನ್ನತ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಮಂಡಳಿ ‘ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್’ (ಎಸ್.ಕೆ.ಐ.ಎಂ.ವಿ.ಬಿ) ಇದರ ಕೇಂದ್ರೀಯ ಸದಸ್ಯರಾಗಿ ಕರ್ನಾಟಕದಿಂದ ದ.ಕ. ಜಿಲ್ಲಾ ಮದ್ರಸ ಮದ್ರಸ ಮ್ಯಾನೇಜ್‍ಮೆಂಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ ಆಯ್ಕೆಯಾಗಿದ್ದಾರೆ. ವಿವಿಧ ರಾಜ್ಯಗಳ ಪ್ರತಿನಿಧಿಗಳಿರುವ ಈ ಶಿಕ್ಷಣ ಮಂಡಳಿಯ ಅಧೀನದಲ್ಲಿ 10 ಸಾವಿರಕ್ಕೂ ಮಿಕ್ಕಿದ ಮದ್ರಸಗಳು ಕಾರ್ಯಾಚರಿಸುತ್ತಿದೆ. ಸಮಾಜ ಸೇವಕರೂ, ಸಂಘಟನಾ ಸಕ್ರಿಯರೂ ಆಗಿರುವ ರಫೀಕ್ ಹಾಜಿಯವರು ದೀರ್ಘಕಾಲದಿಂದ ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‍ಮೆಂಟ್ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಮದ್ರಸ ಮ್ಯಾನೇಜ್‍ಮೆಂಟ್ ಕೇಂದ್ರೀಯ ಉಪಾಧ್ಯಕ್ಷರಾಗಿ, ಪುತ್ತೂರು ರೇಂಜ್ ಮದ್ರಸ ಮ್ಯಾನೇಜ್‍ಮೆಂಟ್ ಅಧ್ಯಕ್ಷರಾಗಿ ಹಾಗೂ ಹಲವಾರು ಸಂಘ, ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾಗಿ ರಫೀಕ್ ಹಾಜಿ ನೇರಳಕಟ್ಟೆ ಆಯ್ಕೆ Rating: 5 Reviewed By: karavali Times
Scroll to Top