ತೊಕ್ಕೊಟ್ಟು ಬೀಫ್ ಸ್ಟಾಲ್ ಬೆಂಕಿ ಪ್ರಕರಣದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿವೈಎಫ್‍ಐ ಆಗ್ರಹ - Karavali Times ತೊಕ್ಕೊಟ್ಟು ಬೀಫ್ ಸ್ಟಾಲ್ ಬೆಂಕಿ ಪ್ರಕರಣದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿವೈಎಫ್‍ಐ ಆಗ್ರಹ - Karavali Times

728x90

9 January 2021

ತೊಕ್ಕೊಟ್ಟು ಬೀಫ್ ಸ್ಟಾಲ್ ಬೆಂಕಿ ಪ್ರಕರಣದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿವೈಎಫ್‍ಐ ಆಗ್ರಹ

ಮಂಗಳೂರು, ಜ. 09, 2021 (ಕರಾವಳಿ ಟೈಮ್ಸ್) : ಉಳ್ಳಾಲ ನಗರಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಇತ್ತೀಚೆಗೆ ನಗರಸಭೆಯ ವತಿಯಿಂದ ಅಧಿಕೃತವಾಗಿ ನಿರ್ಮಿಸಿಕೊಟ್ಟಿದ್ದ ಬೀಫ್ ಸ್ಟಾಲ್‍ಗೆ ಶುಕ್ರವಾರ ರಾತ್ರಿ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಆಗ್ರಹಿಸಿದೆ. ಆಹಾರದ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಬಿಜೆಪಿಯ ನೀತಿಯಿಂದ ಪ್ರೇರೇಪಿತರಾಗಿ ಕೆಲ ದುಷ್ಕರ್ಮಿಗಳು ಇಂತಹ ಕಿಡಿಗೇಡಿ ಕೆಲಸಗಳನ್ನು ಮಾಡುತ್ತಿದ್ದು, ಸಮಾಜದ ಶಾಂತಿಯನ್ನು ಕೆಡಿಸುವ ಇಂತಹ ದುಷ್ಕರ್ಮಿಗಳನ್ನು ಪೆÇಲೀಸರು ತಕ್ಷಣ ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮಕೈಗೊಂಡರೆ ಮಾತ್ರ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬಹುದು. ಕಾಟಾಚಾರದ ಪ್ರಕರಣ ದಾಖಲಿಸಿದರೆ ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಮಾಜಘಾತಕ ಕೃತ್ಯಗಳನ್ನು ನಡೆಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಹಾಗಾಗದಂತೆ ಪೆÇಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಡಿವೈಎಫ್‍ಐ ಒತ್ತಾಯಿಸಿದೆ. ನಗರಸಭೆ ಅದೇ ಸ್ಥಳದಲ್ಲಿ ಈ ಮಾರಾಟಗಾರರಿಗೆ ಮತ್ತೆ ಸ್ಟಾಲ್ ನಿರ್ಮಿಸಿಕೊಟ್ಟು ಅಲ್ಲಿ ಸಿಸಿಟಿವಿ ಅಳವಡಿಸುವುದರ ಮೂಲಕ ಇವರ ಸೊತ್ತುಗಳಿಗೆ ರಕ್ಷಣೆ ಒದಗಿಸುವ ಕೆಲಸವನ್ನೂ ಮಾಡಬೇಕೆಂದು ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡು ಹಾಗೂ ಕಾರ್ಯದರ್ಶಿ ಸುನಿಲ್ ತೇವುಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ತೊಕ್ಕೊಟ್ಟು ಬೀಫ್ ಸ್ಟಾಲ್ ಬೆಂಕಿ ಪ್ರಕರಣದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿವೈಎಫ್‍ಐ ಆಗ್ರಹ Rating: 5 Reviewed By: karavali Times
Scroll to Top