ಮಂಗಳೂರು : ಎಲ್.ಐ.ಸಿ. ಶೇರು ವಿಕ್ರಯ ಹಾಗೂ ಬ್ಯಾಂಕ್ ಖಾಸಗೀಕರಣದ ವಿರುದ್ಧ ಮೊಂಬತ್ತಿ ಪ್ರತಿಭಟನೆ - Karavali Times ಮಂಗಳೂರು : ಎಲ್.ಐ.ಸಿ. ಶೇರು ವಿಕ್ರಯ ಹಾಗೂ ಬ್ಯಾಂಕ್ ಖಾಸಗೀಕರಣದ ವಿರುದ್ಧ ಮೊಂಬತ್ತಿ ಪ್ರತಿಭಟನೆ - Karavali Times

728x90

13 March 2021

ಮಂಗಳೂರು : ಎಲ್.ಐ.ಸಿ. ಶೇರು ವಿಕ್ರಯ ಹಾಗೂ ಬ್ಯಾಂಕ್ ಖಾಸಗೀಕರಣದ ವಿರುದ್ಧ ಮೊಂಬತ್ತಿ ಪ್ರತಿಭಟನೆ
ಮಂಗಳೂರು, ಮಾ.  13, 2021 (ಕರಾವಳಿ ಟೈಮ್ಸ್) : ಎಲ್.ಐ.ಸಿ. ಶೇರು ವಿಕ್ರಯ ಹಾಗೂ ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ವಿಮಾ-ಬ್ಯಾಂಕ್ ನೌಕರರ ಹಾಗೂ ಜನಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮಂಗಳೂರು ನಗರದ ಹೃದಯ ಭಾಗದಲ್ಲಿ ಮೊಂಬತ್ತಿ ಪ್ರತಿಭಟನಾ ಪ್ರದರ್ಶನ ನಡೆಯಿತು. 

ವಿಮಾ-ಬ್ಯಾಂಕ್ ನೌಕರರು, ವಿಮಾ ಪ್ರತಿನಿಧಿಗಳು, ಕಾರ್ಮಿಕರು, ವಿದ್ಯಾರ್ಥಿ, ಯುವ ಜನರು, ಮಹಿಳೆಯರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಭಟನೆಯನ್ನುದ್ದೇಶಿಸಿ ವಿಮಾ ನೌಕರರ ಸಂಘದ ನಾಯಕ ಡೆರಿಕ್ ಲೋಬೋ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡ ಬಿ.ಎಂ. ಮಾಧವ, ಕಾರ್ಮಿಕ ಮುಖಂಡ ಬಿ ಶೇಖರ್,  ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಪ್ರಮುಖ ರಾಘವ, ವಿಮಾ ಪ್ರತಿನಿಧಿಗಳ ಸಂಘಟನೆಯ ಮುಖಂಡ ರಮೇಶ್ ಕುಮಾರ್, ಕಾಂಗ್ರೆಸ್ ಕಾರ್ಮಿಕ ವಿಭಾಗದ ನಾಯಕ ಲಾರೆನ್ಸ್ ಡಿ’ಸೋಜ ಮಾತನಾಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ವಿಮಾ ನೌಕರರ ಮುಂದಾಳುಗಳಾದ ವಿಶ್ವನಾಥ, ಪ್ರಭಾಕರ್ ಕುಂದರ್, ಬಿ ಎನ್ ದೇವಾಡಿಗ, ರಾಘವೇಂದ್ರ ರಾವ್, ಆಲ್ವಿನ್ ಮಸ್ಕರೇನಸ್, ವಸಂತ ಕುಮಾರ್, ರಾಧಿಕಾ ಕಾಮತ್, ಬ್ಯಾಂಕ್ ನೌಕರರ ಮುಖಂಡರಾದ ಪುರುಷೋತ್ತಮ, ಸುನಿಲ್ ರಾಜ್, ಕಾರ್ಮಿಕ ನಾಯಕರಾದ ರಾಮಣ್ಣ ವಿಟ್ಲ, ರವಿಚಂದ್ರ ಕೊಂಚಾಡಿ, ಎಚ್ ವಿ ರಾವ್, ವಿ ಕುಕ್ಯಾನ್, ಕರುಣಾಕರ್, ಸುರೇಶ್ ಕುಮಾರ್, ಡಿವೈಎಫ್‍ಐ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಸುಮತಿ ಎಸ್ ಹೆಗ್ಡೆ, ಹರ್ಷಿತಾ, ಕವಿತಾ, ದಲಿತ ಮುಖಂಡರಾದ ಎಂ ದೇವದಾಸ್, ಸಮುದಾಯದ ವಾಸುದೇವ ಉಚ್ಚಿಲ್, ಸಾಮಾಜಿಕ ಹೋರಾಟಗಾರರಾದ ಸುರೇಶ್ ಶೆಟ್ಟಿ, ಜೆರಾಲ್ಡ್ ಟವರ್, ಸಾಮಾಜಿಕ ಚಿಂತಕರಾದ ಅಶುಂತ ಡಿಸೋಜ, ಪ್ರಮೀಳಾ ದೇವಾಡಿಗ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಎಲ್.ಐ.ಸಿ. ಶೇರು ವಿಕ್ರಯ ಹಾಗೂ ಬ್ಯಾಂಕ್ ಖಾಸಗೀಕರಣದ ವಿರುದ್ಧ ಮೊಂಬತ್ತಿ ಪ್ರತಿಭಟನೆ Rating: 5 Reviewed By: karavali Times
Scroll to Top