ರೋಡ್ ಸೇಫ್ಟಿ ಲೆಜೆಂಡ್ಸ್ ಟೂರ್ನಿಯಲ್ಲೂ ಸಿಡಿಲಾದ ಯುವರಾಜ್ : ದ. ಆಫ್ರಿಕಾ ವಿರುದ್ದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 4 ಸಿಕ್ಸರ್ ಸಿಡಿಸಿದ ಯುವಿ - Karavali Times ರೋಡ್ ಸೇಫ್ಟಿ ಲೆಜೆಂಡ್ಸ್ ಟೂರ್ನಿಯಲ್ಲೂ ಸಿಡಿಲಾದ ಯುವರಾಜ್ : ದ. ಆಫ್ರಿಕಾ ವಿರುದ್ದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 4 ಸಿಕ್ಸರ್ ಸಿಡಿಸಿದ ಯುವಿ - Karavali Times

728x90

13 March 2021

ರೋಡ್ ಸೇಫ್ಟಿ ಲೆಜೆಂಡ್ಸ್ ಟೂರ್ನಿಯಲ್ಲೂ ಸಿಡಿಲಾದ ಯುವರಾಜ್ : ದ. ಆಫ್ರಿಕಾ ವಿರುದ್ದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 4 ಸಿಕ್ಸರ್ ಸಿಡಿಸಿದ ಯುವಿ


ರಾಯಪುರ, ಮಾ. 14, 2021 (ಕರಾವಳಿ ಟೈಮ್ಸ್) : ರಸ್ತೆ ಸುರಕ್ಷತೆಗಾಗಿ ಅಭಿಯಾನ ನಡೆಸುವ ಸಲುವಾಗಿ ಹಿರಿಯ ಕ್ರಿಕೆಟ್ ಆಟಗಾರರನ್ನೊಳಗೊಂಡ ಕ್ರಿಕೆಟ್ ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ ಪರವಾಗಿ ಆಡುತ್ತಿರುವ ಯುವರಾಜ್ ಸಿಂಗ್ ಸೌತ್ ಆಫ್ರಿಕಾ ಲೆಜೆಂಡ್ ತಂಡದ ವಿರುದ್ದ ಒಂದೇ ಓವರಿನಲ್ಲಿ 4 ಸಿಕ್ಸರ್ ಸಿಡಿಸುವ ಮೂಲಕ ಮಾಜಿಯಾದರೂ ಇನ್ನೂ ಸಿಡಿಲಬ್ಬರ ಬ್ಯಾಟಿಂಗ್ ನಡೆಸಲು ನನ್ನಿಂದ ಸಾಧ್ಯವಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. 


    ಸೌತ್ ಆಫ್ರಿಕಾ ಬೌಲರ್ ಝೆಂಡರ್ ಡಿ ಬ್ರುಯನ್ ಅವರ ಒಂದೇ ಓವರಿನ ಸತತ ನಾಲ್ಕು ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಹಳೆಯ ಪೌರುಷವನ್ನು ಮೆರೆದಿದ್ದಾರೆ. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ 22 ಎಸೆತಗಳಲ್ಲಿ ಸಿಡಿಸಿದ ಅಜೇಯ 52 ರನ್‍ಗಳ ನೆರವಿನಿಂದ ಇಂಡಿಯಾ ಲೆಜೆಂಡ್ 20 ಓವರ್‍ಗಳಲ್ಲಿ 204 ರನ್‍ಗಳನ್ನು ಗಳಿಸಿತ್ತು. ಪಂದ್ಯವನ್ನು ಇಂಡಿಯಾ ಲೆಜೆಂಡ್ 56 ರನ್‍ಗಳಿಂದ ಗೆದ್ದುಕೊಂಡಿದೆ. ಈ ಹಿಂದೆ ಯುವರಾಜ್ ಸಿಂಗ್ ಟೀಂ ಇಂಡಿಯಾ ಪರವಾಗಿ ಟಿ-20 ವಿಶ್ವಕಪ್ ಪಂದ್ಯದಲ್ಲಿ ಇಂಗ್ಲಂಡ್ ಬೌಲರ್ ಸ್ಟುವರ್ಟ ಬ್ರಾಡ್ ಅವರ 6 ಎಸೆತಗಳನ್ನು ಸಿಕ್ಸರ್‍ಗೆ ಅಟ್ಟಿದ್ದನ್ನು ಈ ಸಂದರ್ಭ ಸ್ಮರಿಸಿಕೊಳ್ಳಬಹುದು.

  • Blogger Comments
  • Facebook Comments

0 comments:

Post a Comment

Item Reviewed: ರೋಡ್ ಸೇಫ್ಟಿ ಲೆಜೆಂಡ್ಸ್ ಟೂರ್ನಿಯಲ್ಲೂ ಸಿಡಿಲಾದ ಯುವರಾಜ್ : ದ. ಆಫ್ರಿಕಾ ವಿರುದ್ದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 4 ಸಿಕ್ಸರ್ ಸಿಡಿಸಿದ ಯುವಿ Rating: 5 Reviewed By: karavali Times
Scroll to Top