ಐಪಿಎಲ್ ಸೀಸನ್-14 : ಚೆನ್ನೈ ವಿರುದ್ದ ಡೆಲ್ಲಿಗೆ 7 ವಿಕೆಟ್ ನಿರಾಯಾಸ ಜಯ - Karavali Times ಐಪಿಎಲ್ ಸೀಸನ್-14 : ಚೆನ್ನೈ ವಿರುದ್ದ ಡೆಲ್ಲಿಗೆ 7 ವಿಕೆಟ್ ನಿರಾಯಾಸ ಜಯ - Karavali Times

728x90

11 April 2021

ಐಪಿಎಲ್ ಸೀಸನ್-14 : ಚೆನ್ನೈ ವಿರುದ್ದ ಡೆಲ್ಲಿಗೆ 7 ವಿಕೆಟ್ ನಿರಾಯಾಸ ಜಯ


ಮುಂಬೈ, ಎಪ್ರಿಲ್ 11, 2021 (ಕರಾವಳಿ ಟೈಮ್ಸ್) : ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ 14ನೇ ಆವೃತ್ತಿಯ ದ್ವಿತೀಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್  ಏಳು ವಿಕೆಟ್‍ಗಳಿಂದ ಮಣಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ನಿಗದಿಪಡಿಸಿದ್ದ 189 ರನ್‍ಗಳ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ 8 ಎಸೆತಗಳು ಬಾಕಿ ಉಳಿದಿರುವಂತೆ 18.4 ಓವರ್ ಗಳಲ್ಲಿ 190 ರನ್ ಗಳಿಸಿ ಜಯಭೇರಿ ಭಾರಿಸಿತು. 

ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಶಿಖರ್ ಧವನ್, ಉತ್ತಮ ಪ್ರದರ್ಶದ ಮೂಲಕ ಪಂದ್ಯ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೃಥ್ವಿ ಶಾ 38 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‍ಗಳೊಂದಿಗೆ  72 ರನ್ ಬಾರಿಸಿದರೆ, ಶಿಖರ್ ಧವನ್ 54 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‍ಗಳೊಂದಿಗೆ 85 ರನ್ ಭಾರಿಸಿದರು. 

ನಂತರ ಬಂದ ಮಾರ್ಕಸ್ ಸ್ಟೊಯಿನಿಸ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ರಿಷಭ್ ಪಂತ್, ಎರಡು ಬೌಂಡರಿ ನೆರವಿನಿಂದ 15 ರನ್ ಗಳಿಸಿ ಔಟಾಗದೆ ಉಳಿದರು. ಚೆನ್ನೈ ಪರ ಶಾರ್ದೂಲ್ ಎರಡು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್  ಸುರೇಶ್ ರೈನಾ ಅವರ ಆಕರ್ಷಕ 54 ರನ್ ಮತ್ತು ಸ್ಯಾಮ್ ಕರನ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ನಾಯಕ ಧೋನಿ ಶೂನ್ಯ ಸಂಪಾದಿಸಿದರೆ, ಮೊಯಿಲ್ ಅಲಿ 36, ರವೀಂದ್ರ ಜಡೇಜಾ 26, ಅಂಬಟಿ ರಾಯುಡು 23 ರನ್ ಗಳಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ ಸೀಸನ್-14 : ಚೆನ್ನೈ ವಿರುದ್ದ ಡೆಲ್ಲಿಗೆ 7 ವಿಕೆಟ್ ನಿರಾಯಾಸ ಜಯ Rating: 5 Reviewed By: karavali Times
Scroll to Top