ಶ್ರೀನಿವಾಸ್ ಆಸ್ಪತ್ರೆ ಹಾಗೂ ಎನ್‍ಐಟಿಕೆ ಸಹಯೋಗದಲ್ಲಿ ಕೋವಿಡ್ ಸೆಂಟರಿಗೆ ವೈದ್ಯರ ಸೇವೆ - Karavali Times ಶ್ರೀನಿವಾಸ್ ಆಸ್ಪತ್ರೆ ಹಾಗೂ ಎನ್‍ಐಟಿಕೆ ಸಹಯೋಗದಲ್ಲಿ ಕೋವಿಡ್ ಸೆಂಟರಿಗೆ ವೈದ್ಯರ ಸೇವೆ - Karavali Times

728x90

22 May 2021

ಶ್ರೀನಿವಾಸ್ ಆಸ್ಪತ್ರೆ ಹಾಗೂ ಎನ್‍ಐಟಿಕೆ ಸಹಯೋಗದಲ್ಲಿ ಕೋವಿಡ್ ಸೆಂಟರಿಗೆ ವೈದ್ಯರ ಸೇವೆ


ಮಂಗಳೂರು, ಮೇ 22, 2021 (ಕರಾವಳಿ ಟೈಮ್ಸ್) :
ಎನ್‍ಐಟಿಕೆ ಹಿಮಾಲಯ ಬ್ಲಾಕ್ ಹಾಸ್ಟೆಲ್‍ನಲ್ಲಿ ಕೋವಿಡ್ ಕೇರ್ ಸೆಂಟರನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟಿಸಿದರು.
    ಈ ಸೆಂಟರಿನಲ್ಲಿ 250 ಸಿಂಗಲ್ ಐಸೋಲೇಟ್ ಬೆಡ್‍ಗಳಿದ್ದು, ರೋಗ ಲP್ಷÀಣಗಳಿಲ್ಲದ ಕೋವಿಡ್ ರೋಗಿಗಳನ್ನು ಈಸೋಲೇಟ್ ಮಾಡುವ ವ್ಯವಸ್ಥೆ ಲಭ್ಯವಿರುತ್ತದೆ. ಶ್ರೀನಿವಾಸ್‍ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಭಾಗವಹಿಸಿ ಮಾತನಾಡಿ, ಈ ಕೋವಿಡ್ ಕೇರ್ ಸೆಂಟರ್‍ಗೆ ಅಗತ್ಯ ವೈದ್ಯರ ಹಾಗೂ ದಾದಿಯರ ಸೇವೆಯನ್ನು ಶ್ರೀನಿವಾಸ್ ಆಸ್ಪತ್ರೆಯು ಪೂರೈಸುವುದಾಗಿ ಆಶ್ವಾಸನೆ ನೀಡಿದರು. ಸ್ಥಳೀಯ ಕಾರ್ಪರೇಟರ್‍ಗಳಾದ  ಶ್ವೇತ, ಶೋಭಾ, ಲೋಕೇಶ್ ಬೊಳ್ಳಾಜೆ ಹಾಗೂ ಸರಿತ, ಎನ್‍ಐಟಿಕೆಯ ಕುಲಸಚಿವ ಡಾ. ರವೀಂದ್ರ, ಶ್ರೀನಿವಾಸ್ ವಿವಿಯ ಕುಲಸಚಿವ (ಅಭಿವೃದ್ಧಿ) ಡಾ. ಅಜಯ್ ಕುಮಾರ್, ಮೆಡಿಕಲ್ ಸುಪರಿಟೆಂಡೆಂಟ್ ಡಾ. ವಿನೋದ್ ಪ್ರೇಮ್ ಸಿಂಗ್, ಪಿ.ಜಿ. ಸಂಯೋಜಕ ಡಾ. ಡೇವಿಡ್, ಶ್ರೀನಿವಾಸ್, ವಿವಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಡೀನ್ ಡಾ ಶ್ಯಾಮ್ ಕಿಶೋರ್ ಉಪಸ್ಥಿತರಿದ್ದರು.
    ಶ್ರೀನಿವಾಸ್ ಇನ್ಸ್ಟ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್ ಡೀನ್ ಡಾ. ಉದಯ ಕುಮಾರ್ ರಾವ್ ಸ್ವಾಗತಿಸಿ, ಶ್ರೀನಿವಾಸ್ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ಅನಿತಾ ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಶ್ರೀನಿವಾಸ್ ಆಸ್ಪತ್ರೆ ಹಾಗೂ ಎನ್‍ಐಟಿಕೆ ಸಹಯೋಗದಲ್ಲಿ ಕೋವಿಡ್ ಸೆಂಟರಿಗೆ ವೈದ್ಯರ ಸೇವೆ Rating: 5 Reviewed By: karavali Times
Scroll to Top