ಪಿಜಿ - ನೀಟ್ ಪರೀಕ್ಷೆ ಮತ್ತೆ 4 ತಿಂಗಳು ಮುಂದೂಡಿ ಕೇಂದ್ರ ಸರಕಾರ ಆದೇಶ - Karavali Times ಪಿಜಿ - ನೀಟ್ ಪರೀಕ್ಷೆ ಮತ್ತೆ 4 ತಿಂಗಳು ಮುಂದೂಡಿ ಕೇಂದ್ರ ಸರಕಾರ ಆದೇಶ - Karavali Times

728x90

3 May 2021

ಪಿಜಿ - ನೀಟ್ ಪರೀಕ್ಷೆ ಮತ್ತೆ 4 ತಿಂಗಳು ಮುಂದೂಡಿ ಕೇಂದ್ರ ಸರಕಾರ ಆದೇಶ

 

ನವದೆಹಲಿ, ಮೇ 03, 2021 (ಕರಾವಳಿ ಟೈಮ್ಸ್) : ದೇಶದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಎರಡನೇ ಅಲೆ ಹಾಗೂ ವಿವಿಧ ರಾಜ್ಯಗಳಲ್ಲಿ ಹೇರಲಾಗುತ್ತಿರುವ ಕರ್ಫ್ಯೂ ಹಿನ್ನಲೆಯಲ್ಲಿ ಪರಿಸ್ಥಿತಿ ಸುಧಾರಿಸಲು ಕಾಲಾವಕಾಶ ಬೇಕು ಎಂದರಿತ ಕೇಂದ್ರ ಸರಕಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯುವ ಈ ಬಾರಿಯ ರಾಷ್ಟ್ರೀಯ ಪ್ರವೇಶ ಪರೀಕ್ಷೆ ಹಾಗೂ ಪಿಜಿ ನೀಟ್ ಪರೀಕ್ಷೆಯನ್ನು 4 ಮತ್ತೆ ತಿಂಗಳು ಮುಂದೂಡಿಕೆ ಮಾಡಿದೆ.

ಈ ಬಗ್ಗೆ ವಿವರ ನೀಡಿರುವ ಕೇಂದ್ರ ಸರಕಾರ, ಕೋವಿಡ್-19 ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. 

ಈ ನಿಟ್ಟಿನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಹಾಗೂ ನೀಟ್ ಪಿಜಿ ಪರೀಕ್ಷೆಯನ್ನು ಕನಿಷ್ಠ 4 ತಿಂಗಳವರೆಗೆ ಮುಂದೂಡಲಾಗುವುದು ಎಂದು ಪ್ರಧಾನಿ ಕಛೇರಿ ಮಾಹಿತಿ ನೀಡಿದೆ.

ಇದರೊಂದಿಗೆ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಟೆಲಿಕನ್ಸಲ್ಟೇಷನ್ ಹಾಗೂ ಸಣ್ಣ ಪ್ರಮಾಣದ ಲಕ್ಷಣಗಳಿರುವ ಕೋವಿಡ್ ಪ್ರಕರಣಗಳ ಮೇಲ್ವಿಚಾರಣೆಗೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹಿರಿಯ ವೈದ್ಯರು ಮತ್ತು ನರ್ಸ್ ಗಳ ಮೇಲ್ವಿಚಾರಣೆಯಲ್ಲಿ ಬಿಎಸ್ಸಿ ಮತ್ತು ಜಿಎನ್‍ಎಂ ಅರ್ಹ ನರ್ಸ್ ಗಳನ್ನು ಪೂರ್ಣ ಪ್ರಮಾಣದ ಕೋವಿಡ್ ನರ್ಸಿಂಗ್ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಕುರಿತು ಈಗಾಗಲೇ ಪ್ರಧಾನಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಿಜಿ - ನೀಟ್ ಪರೀಕ್ಷೆ ಮತ್ತೆ 4 ತಿಂಗಳು ಮುಂದೂಡಿ ಕೇಂದ್ರ ಸರಕಾರ ಆದೇಶ Rating: 5 Reviewed By: karavali Times
Scroll to Top