ಮಾದಕ ವ್ಯಸನ ಮತ್ತು ವಿರೋಧಿ ದಿನದ ಅಂಗವಾಗಿ ದ.ಕ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ನಾಶ ಮಾಡಿದ ಪೊಲೀಸ್ ಇಲಾಖೆ - Karavali Times ಮಾದಕ ವ್ಯಸನ ಮತ್ತು ವಿರೋಧಿ ದಿನದ ಅಂಗವಾಗಿ ದ.ಕ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ನಾಶ ಮಾಡಿದ ಪೊಲೀಸ್ ಇಲಾಖೆ - Karavali Times

728x90

26 June 2021

ಮಾದಕ ವ್ಯಸನ ಮತ್ತು ವಿರೋಧಿ ದಿನದ ಅಂಗವಾಗಿ ದ.ಕ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ನಾಶ ಮಾಡಿದ ಪೊಲೀಸ್ ಇಲಾಖೆ

ಮಂಗಳೂರು, ಜೂನ್ 26, 2021 (ಕರಾವಳಿ ಟೈಮ್ಸ್) : ಜೂನ್ 26 ಅಂತರಾಷ್ಟ್ರ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡು ವಿಲೇವಾರಿಯಾಗದೆ ಬಾಕಿಯಾಗಿದ್ದ ಮಾದಕ ವಸ್ತುಗಳನ್ನು ಶನಿವಾರ ನಾಶಪಡಿಸÀಲಾಯಿತು.

ಈ ಬಗ್ಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಾದಕ ದ್ರವ್ಯ ವಿಲೇವಾರಿ ಸಮಿತಿ ಅಧ್ಯಕ್ಷ ಸೊನಾವಣೆ ಋಷಿಕೇಶ್ ಭಗವಾನ್, ಸದಸ್ಯರುಗಳಾದ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜ ಹಾಗೂ ಗಾನ ಪಿ ಕುಮಾರ್ ಅವರ ಸಮಕ್ಷಮದಲ್ಲಿ ವಿವಿಧ ಠಾಣೆಗಳ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸುಮಾರು 25,11,080/- ರೂಪಾಯಿ ಮೌಲ್ಯದ 221 ಕೆಜಿ 910 ಗ್ರಾಂ ಮಾದಕ ವಸ್ತು ಗಾಂಜಾವನ್ನು ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆ, ಸಂಸ್ಕರಣೆ ಮತ್ತು ವಿಲೇವಾರಿ ಘಟಕ ಮೆ ರಾಮ್ಕಿ ಎನರ್ಜಿ ಮತ್ತು ಎನ್ವಿರೋನ್‍ಮೆಂಟ್ ಲಿ ಅವರಿಗೆ ಹಸ್ತಾಂತರಿಸಿ ನಾಶಪಡಿಸಲಾಯಿತು ಎಂದು ಎಸ್ಪಿ ಕಛೇರಿ ಪ್ರಕಟಣೆ ತಿಳಿಸಿದೆ. 


  • Blogger Comments
  • Facebook Comments

0 comments:

Post a Comment

Item Reviewed: ಮಾದಕ ವ್ಯಸನ ಮತ್ತು ವಿರೋಧಿ ದಿನದ ಅಂಗವಾಗಿ ದ.ಕ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ನಾಶ ಮಾಡಿದ ಪೊಲೀಸ್ ಇಲಾಖೆ Rating: 5 Reviewed By: karavali Times
Scroll to Top