ವ್ಯಕ್ತಿಯಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ : ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯಿಂದ ಪೊಲೀಸರಿಗೆ ದೂರು - Karavali Times ವ್ಯಕ್ತಿಯಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ : ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯಿಂದ ಪೊಲೀಸರಿಗೆ ದೂರು - Karavali Times

728x90

22 July 2021

ವ್ಯಕ್ತಿಯಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ : ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯಿಂದ ಪೊಲೀಸರಿಗೆ ದೂರು

ಬಂಟ್ವಾಳ, ಜುಲೈ 22, 2021 (ಕರಾವಳಿ ಟೈಮ್ಸ್) : ಕೋವಿಡ್-19 ಖಚಿತ ಪ್ರಕರಣದಲ್ಲಿ ಕ್ವಾರಂಟೈನ್ ಆಗದೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಂಟ್ವಾಳ ಕಸಬಾ ಗ್ರಾಮದ ಲೊರೆಟ್ಟೊ ನಿವಾಸಿ ಹುಸೈನ್ ಅವರ ವಿರುದ್ದ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. 

ಹುಸೈನ್ ಅವರು ಕೋವಿಡ್-19 ಖಚಿತ ಪ್ರಕರಣದಲ್ಲಿ ಜುಲೈ 16 ರಿಂದ ಕ್ವಾರಂಟೈನಿನಲ್ಲಿರಬೇಕಿತ್ತು, ಆದರೆ ಆತ ಕ್ವಾರಂಟೈನ್ ಇರದೆ ಸಾಂಕ್ರಮಿಕ ರೋಗ ನಿಯಂತ್ರಣ ಕಾಯ್ದೆಯ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರಿರುವ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ನೀಡಿರುವ ಹಿನ್ನಲೆಯಲ್ಲಿ ಹುಸೈನ್ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2021 ರಂತೆ ಕಲಂ 269, 270 ಐಪಿಸಿ ಮತ್ತು ಕಲಂ 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ವ್ಯಕ್ತಿಯಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ : ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯಿಂದ ಪೊಲೀಸರಿಗೆ ದೂರು Rating: 5 Reviewed By: karavali Times
Scroll to Top