ಕೋವಿಡ್ ಬಗ್ಗೆ ಸಿಎಂ ತಜ್ಞರ ಜೊತೆ ಸಭೆ : 2 ವಾರ ಲಾಕ್ ಡೌನ್, ವಿಕೇಂಡ್ ಕರ್ಫ್ಯೂ ಜಾರಿ ಇಲ್ಲ, ಶಾಲಾರಂಭಕ್ಕೂ ಗ್ರೀನ್ ಸಿಗ್ನಲ್ ನೀಡಿದ ಬೊಮ್ಮಾಯಿ - Karavali Times ಕೋವಿಡ್ ಬಗ್ಗೆ ಸಿಎಂ ತಜ್ಞರ ಜೊತೆ ಸಭೆ : 2 ವಾರ ಲಾಕ್ ಡೌನ್, ವಿಕೇಂಡ್ ಕರ್ಫ್ಯೂ ಜಾರಿ ಇಲ್ಲ, ಶಾಲಾರಂಭಕ್ಕೂ ಗ್ರೀನ್ ಸಿಗ್ನಲ್ ನೀಡಿದ ಬೊಮ್ಮಾಯಿ - Karavali Times

728x90

14 August 2021

ಕೋವಿಡ್ ಬಗ್ಗೆ ಸಿಎಂ ತಜ್ಞರ ಜೊತೆ ಸಭೆ : 2 ವಾರ ಲಾಕ್ ಡೌನ್, ವಿಕೇಂಡ್ ಕರ್ಫ್ಯೂ ಜಾರಿ ಇಲ್ಲ, ಶಾಲಾರಂಭಕ್ಕೂ ಗ್ರೀನ್ ಸಿಗ್ನಲ್ ನೀಡಿದ ಬೊಮ್ಮಾಯಿ

 ಬೆಂಗಳೂರು, ಆಗಸ್ಟ್ 14, 2021 (ಕರಾವಳಿ ಟೈಮ್ಸ್) : ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ತಜ್ಞರು, ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸದ್ಯಕ್ಕೆ ಮುಂದಿನ ಎರಡು ವಾರ ಲಾಕ್ ಡೌನ್ ಆಗಲಿ ಅಥವಾ ವಾರಾಂತ್ಯ ನಿರ್ಬಂಧಗಳಾಗಲೀ ಜಾರಿ ಮಾಡುವುದಿಲ್ಲ. ಸದ್ಯ ಜಾರಿಯಲ್ಲಿರುವ ಕೋವಿಡ್ ನಿಯಮಗಳನ್ನೇ ಮುಂದುವರಿಸುವುದಾಗಿ ಸಭೆಯ ಬಳಿಕ ಸಿಎಂ ತಿಳಿಸಿದ್ದಾರೆ. 

ಸೋಂಕು ಹೆಚ್ಚಿರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ಆರಂಭಿಸುವಂತೆ ಇದೇ ವೇಳೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್  ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯುವುದು ಬೇಡ, ಪಾಟಿವಿವಿಟಿ 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಶಾಲೆ ಆರಂಭವಾದ ನಂತರ ಪಾಸಿಟಿವಿಟಿ ದರ ಶೇ. 2ಕ್ಕಿಂತ ಹೆಚ್ಚಾದಲ್ಲಿ ಒಂದು ವಾರಗಳ ಕಾಲ ಶಾಲೆ ಮುಚ್ಚಬೇಕು. ಸ್ಯಾನಿಟೈಸ್ ಮಾಡಿದ ಒಂದು ವಾರದ ನಂತರ ಪುನರಾರರಂಭಿಸಲು ತೀರ್ಮಾನಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರಿನಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದ್ದು, ಪರೀಕ್ಷೆ, ಲಸಿಕೆ ಹೆಚ್ಚಾಗಬೇಕು. ಮಹಾರಾಷ್ಟ್ರ ಮತ್ತು ಕೇರಳ ಗಡಿಯಲ್ಲಿನ 10 ಕಿಲೋ ಮೀಟರ್ ಒಳಗಿನ ಹಳ್ಳಿಗಳಲ್ಲಿ  ಪರೀಕ್ಷೆ ಪ್ರಮಾಣ ಹೆಚ್ಚಿಸಲು ಸೂಚಿಸಲಾಗಿದೆ ಎಂದು ಹೇಳಿದರು. 

ಸಂಭಾವ್ಯ ಮೂರನೇ ಅಲೆ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಕಲಬುರಗಿ ಮತ್ತು ಬೆಳಗಾವಿ, ಹುಬ್ಬಳ್ಳಿಯಲ್ಲಿ ಮುಂದಿನ ಮೂರು ವಾರಗಳೊಳಗೆ ಜಿನೋಬ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆಗೆ ಮಾಡಬೇಕೆಂದು ಸೂಚಿಸಲಾಗಿದೆ. ಮಕ್ಕಳ ಆರೈಕೆಗಾಗಿ  ಆಸ್ಪತ್ರೆಗಳಲ್ಲಿ ಬೆಡ್, ಐಸಿಯು ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಮುಂದಿನ ವಾರ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ, ಲಸಿಕೆ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವಂತೆ ಮನವಿ ಮಾಡುವುದಾಗಿ ಇದೇ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್ ಬಗ್ಗೆ ಸಿಎಂ ತಜ್ಞರ ಜೊತೆ ಸಭೆ : 2 ವಾರ ಲಾಕ್ ಡೌನ್, ವಿಕೇಂಡ್ ಕರ್ಫ್ಯೂ ಜಾರಿ ಇಲ್ಲ, ಶಾಲಾರಂಭಕ್ಕೂ ಗ್ರೀನ್ ಸಿಗ್ನಲ್ ನೀಡಿದ ಬೊಮ್ಮಾಯಿ Rating: 5 Reviewed By: karavali Times
Scroll to Top