ಪರೀಕ್ಷೆ ಹಾಜರಾಗದೆ ಬೇರೆ ವಿದ್ಯಾರ್ಥಿ ಹಾಜರಾದ ವಿದ್ಯಾರ್ಥಿ ಹೊರತು ಉಳಿದ ಎಲ್ಲರೂ ಎಸ್ಸೆಸ್ಸೆಲ್ಸಿ ಪಾಸ್ - Karavali Times ಪರೀಕ್ಷೆ ಹಾಜರಾಗದೆ ಬೇರೆ ವಿದ್ಯಾರ್ಥಿ ಹಾಜರಾದ ವಿದ್ಯಾರ್ಥಿ ಹೊರತು ಉಳಿದ ಎಲ್ಲರೂ ಎಸ್ಸೆಸ್ಸೆಲ್ಸಿ ಪಾಸ್ - Karavali Times

728x90

9 August 2021

ಪರೀಕ್ಷೆ ಹಾಜರಾಗದೆ ಬೇರೆ ವಿದ್ಯಾರ್ಥಿ ಹಾಜರಾದ ವಿದ್ಯಾರ್ಥಿ ಹೊರತು ಉಳಿದ ಎಲ್ಲರೂ ಎಸ್ಸೆಸ್ಸೆಲ್ಸಿ ಪಾಸ್

ಬೆಂಗಳೂರು, ಆಗಸ್ಟ್ 09, 2021 (ಕರಾವಳಿ ಟೈಮ್ಸ್) : ರಾಜ್ಯದ ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ನೂತನ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸೋಮವಾರ ಅಪರಾಹ್ನ ಪ್ರಕಟಿಸಿದ್ದು, ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 99.99 ಮಂದಿ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 

ಏಕೈಕ ವಿದ್ಯಾರ್ಥಿ ತನ್ನ ಬದಲಿಗೆ ಬೇರೆ ವಿದ್ಯಾರ್ಥಿಯನ್ನು ಪರೀಕ್ಷೆಗೆ ಕಳುಹಿಸಿದ್ದರಿಂದ ಅ ವಿದ್ಯಾರ್ಥಿಯ ವಿರುದ್ದ ಕ್ರಮ ಕೈಗೊಂಡ ಪರಿಣಾಮ ಶೇ 100 ವಿದ್ಯಾರ್ಥಿಗಳು ಪಾಸ್ ಆಗುವುದು ತಪ್ಪಿ ಹೋಗಿದೆ. 

ಒಟ್ಟು 8,71,443 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು, 8,71,442 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಂಪ್ಯೂಟರ್ ಮೌಲ್ಯಮಾಪನ ಮಾಡಲಾಗಿದ್ದು ಎಲ್ಲೂ ಲೋಪ ಆಗಿಲ್ಲ. 4,701,50 ವಿದ್ಯಾರ್ಥಿಗಳು, 4,01,281 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. 

1,28,931 ಮಂದಿ ಎ + ಗ್ರೇಡ್, 2,50,317 ಮಂದಿ ಎ ಗ್ರೇಡ್, 2,87,684 ಮಂದಿ ಬಿ ಗ್ರೇಡ್, 1,13,610 ವಿದ್ಯಾರ್ಥಿಗಳು ಸಿ ಗ್ರೇಡ್ ಹಾಗೂ ಶೇ 9 ಮಂದಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಿ ಪಾಸ್ ಮಾಡಲಾಗಿದೆ ಎಂದು ಸಚಿವ ನಾಗೇಶ್ ಮಾಹಿತಿ ನೀಡಿದರು.  

  • Blogger Comments
  • Facebook Comments

0 comments:

Post a Comment

Item Reviewed: ಪರೀಕ್ಷೆ ಹಾಜರಾಗದೆ ಬೇರೆ ವಿದ್ಯಾರ್ಥಿ ಹಾಜರಾದ ವಿದ್ಯಾರ್ಥಿ ಹೊರತು ಉಳಿದ ಎಲ್ಲರೂ ಎಸ್ಸೆಸ್ಸೆಲ್ಸಿ ಪಾಸ್ Rating: 5 Reviewed By: karavali Times
Scroll to Top