ನವದೆಹಲಿ, ಆಗಸ್ಟ್ 09, 2021 (ಕರಾವಳಿ ಟೈಮ್ಸ್) : ಇನ್ನು ಮುಂದೆ ಕೋವಿಡ್ ಲಸಿಕಾ ಪ್ರಮಾಣ ಪತ್ರವನ್ನು ವಾಟ್ಸಪ್ ಮೂಲಕ ಪಡೆಯಬಹುದು. ಇಂತಹ ವ್ಯವಸ್ಥೆಗೆ ಕೇಂದ್ರ ಸರಕಾರ ಚಾಲನೆ ನೀಡಿದೆ. ಲಸಿಕೆ ಪಡೆದವರು ತಮ್ಮ ನೊಂದಾಯಿತ ಮೊಬೈಲ್ ಸಂಖ್ಯೆ ಮೂಲಕ ‘ಕೋವಿಡ್ ಸರ್ಟಿಫಿಕೇಟ್’ ಎಂದು ಟೈಪ್ ಮಾಡಿ ಸರಕಾರದ ಅಧಿಕೃತ ಕೊರೋನಾ ಸಹಾಯ ಡೆಸ್ಕ್ +91 90131-51515 ಸಂಖ್ಯೆಗೆ ಕಳಿಸಬೇಕು.
ಆ ಬಳಿಕ 30 ಸೆಕೆಂಡ್‍ನಲ್ಲಿ ಒಟಿಪಿ ಬರಲಿದ್ದು, ಈ ಒಟಿಪಿ ಸಂಖ್ಯೆ ನಮೂದಿಸಿದರೆ ಕೋವಿಡ್ ಪ್ರಮಾಣ ಪತ್ರ ಬರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಟ್ವೀಟ್ ಮಾಡಿದೆ. ದೇಶದಲ್ಲಿ ಯಾವುದೇ ವ್ಯಕ್ತಿ ಕೋವಿಡ್ ಲಸಿಕೆಯ ಮೊದಲ ಮತ್ತು 2ನೇ ಡೋಸ್ ಪಡೆದ ಕೆಲವೇ ಸೆಕೆಂಡ್‍ಗಳಲ್ಲಿ ಆ ವ್ಯಕ್ತಿಯ ಮೊಬೈಲ್‍ಗೆ ಸಂದೇಶದ ಮುಖಾಂತರ ಕೋವಿಡ್ ಪ್ರಮಾಣ ಪತ್ರದ ಲಿಂಕ್ ಬರುತ್ತದೆ. ಈ ಲಿಂಕ್ ಮೂಲಕ ಪ್ರಮಾಣ ಪತ್ರ ಡೌನ್ ಲೋಡ್ ಮಾಡಲು ತಾಂತ್ರಿಕ ದೋಷಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಸರಕಾರ ಇನ್ನಷ್ಟು ಸುಲಭಗೊಳಿಸಲು ವಾಟ್ಸಪ್ ಮೂಲಕ ಪ್ರಮಾಣ ಪತ್ರ ಕಳುಹಿಸುವ ವ್ಯವಸ್ಥೆ ಮಾಡಿದೆ.
ವಾಟ್ಸಪ್ ಮೂಲಕ ಪ್ರಮಾಣ ಪತ್ರ ಪಡೆಯುವ ವ್ಯವಸ್ಥೆಗೆ ಮೊದಲಿಗೆ +91 90131-51515 ಸೇವ್ ಮಾಡಿಕೊಳ್ಳಿ. ಈ ಸಂಖ್ಯೆಗೆ ವಾಟ್ಸಪ್‍ನಲ್ಲಿ ‘ಕೋವಿಡ್ ಸರ್ಟಿಫಿಕೇm’ï ಎಂದು ಟೈಪ್ ಮಾಡಿ ಕಳಿಸಿ, ಕೆಲವೇ ಸೆಕೆಂಡ್‍ಗಳಲ್ಲಿ ನೋಂದಾಯಿತ ಮೊಬೈಲ್‍ಗೆ ಒಟಿಪಿ ಬರಲಿದೆ. ಈ ಒಟಿಪಿ ನಮೂದಿಸಿದರೆ ನಿಮ್ಮ ಕೋವಿಡ್ ಪ್ರಮಾಣ ಪತ್ರ ತೆರೆದುಕೊಳ್ಳಲಿದೆ.
0 comments:
Post a Comment