ಶುಕ್ರವಾರದಿಂದ (ಸೆ 17) ದ.ಕ. ಜಿಲ್ಲೆಯಲ್ಲಿ ಶಾಲೆ-ಪ್ರಥಮ ಪಿಯುಸಿ ಆರಂಭಿಸಲು ಡೀಸಿ ಅಸ್ತು : ಶುಲ್ಕ ಪಾವತಿಗೆ ಒತ್ತಾಯಿಸದಂತೆ ಎಚ್ಚರಿಕೆ - Karavali Times ಶುಕ್ರವಾರದಿಂದ (ಸೆ 17) ದ.ಕ. ಜಿಲ್ಲೆಯಲ್ಲಿ ಶಾಲೆ-ಪ್ರಥಮ ಪಿಯುಸಿ ಆರಂಭಿಸಲು ಡೀಸಿ ಅಸ್ತು : ಶುಲ್ಕ ಪಾವತಿಗೆ ಒತ್ತಾಯಿಸದಂತೆ ಎಚ್ಚರಿಕೆ - Karavali Times

728x90

15 September 2021

ಶುಕ್ರವಾರದಿಂದ (ಸೆ 17) ದ.ಕ. ಜಿಲ್ಲೆಯಲ್ಲಿ ಶಾಲೆ-ಪ್ರಥಮ ಪಿಯುಸಿ ಆರಂಭಿಸಲು ಡೀಸಿ ಅಸ್ತು : ಶುಲ್ಕ ಪಾವತಿಗೆ ಒತ್ತಾಯಿಸದಂತೆ ಎಚ್ಚರಿಕೆ

ಮಂಗಳೂರು, ಸೆಪ್ಟಂಬರ್ 15, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರ ಶುಕ್ರವಾರದಿಂದ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಶಾಲೆ ಹಾಗೂ ಪ್ರಥಮ ಪಿಯುಸಿ ಆರಂಭಿಸಲು ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಅಸ್ತು ಎಂದಿದ್ದಾರೆ. 

ಇಲಾಖಾಧಿಕಾರಿಗಳ ಸಭೆ ನಡೆಸಿದ ಬಳಿಕ ಡೀಸಿ ಶಾಲಾರಂಭಕ್ಕೆ ಅನುಮತಿ ನೀಡಿದ್ದಾರೆ. ಮಕ್ಕಳಿಗೆ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದಿರುವ ಡೀಸಿ ಸೆಪ್ಟೆಂಬರ್ 17ರಂದು 8, 9 ಮತ್ತು 10 ನೇ ತರಗತಿಗಳನ್ನು ಆರಂಭಿಸಲು ಅನುಮತಿಸಲಾಗಿದೆ. ಸೆಪ್ಟೆಂಬರ್ 20 ರಂದು 6 ಮತ್ತು 7ನೇ ತರಗತಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಎಲ್ಲಾ ಪ್ರಥಮ ಪಿ.ಯು.ಸಿ ತರಗತಿಗಳನ್ನು ಆರಂಭಿಸಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಶೇ.99 ರಷ್ಟು ಶಾಲಾ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡಲಾಗಿದೆ. ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಅಂತವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶಾಲೆಗಳು ಆರಂಭವಾದ ನಂತರ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಶಿಕ್ಷಕರು ಸೂಕ್ತ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ. 

ಶಾಲೆ ಆರಂಭಗೊಂಡ ಬಳಿಕ ವಿದ್ಯಾರ್ಥಿ ಪೋಷಕರನ್ನು ಯಾವುದೇ ಕಾರಣಕ್ಕೂ ಶುಲ್ಕ ಪಾವತಿಗೆ ಒತ್ತಾಯಿಸುವಂತಿಲ್ಲ ಎಂದು ಇದೇ ವೇಳೆ ಡೀಸಿ ಎಚ್ಚರಿಸಿದ್ದಾರೆ. ಶಾಲಾವಧಿಯಲ್ಲಿ ಕೋವಿಡ್ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡ ಬಗ್ಗೆ ಶಾಲಾಡಳಿತ ಮಂಡಳಿಗಳು ಖಚಿತಪಡಿಸಿಕೊಳ್ಳಬೇಕು. ಶಾಲೆಗಳನ್ನು ಶೌಚಾಲಯ ಸಹಿತ ಮೂಲಭೂತ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಒದಗಿಸಬೇಕು, ಭೌತಿಕ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪೋಷಕರ ಒಪ್ಪಿಗೆ ಕಡ್ಡಾಯ, ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು ಹಾಗೂ ಅವರಿಗೆ ಆನ್ ಲೈನ್ ಶಿಕ್ಷಣ ನೀಡಬೇಕು. ಭೌತಿಕ ತರಗತಿ ಜೊತೆಗೆ ಆನ್ ಲೈನ್ ತರಗತಿಗಳನ್ನೂ ಮುಂದುವರಿಸಬೇಕು. ಶಿಕ್ಷಕರು ಕೋವಿಡ್ ನೆಗಟಿವ್ ವರದಿ ಹೊಂದಿರುವುದು ಕಡ್ಡಾಯ. ಕೇರಳದಿಂದ ಬರುವ ಶಿಕ್ಷಕರು-ಸಿಬ್ಬಂದಿಗಳು 2 ಡೋಸ್ ಲಸಿಕೆ ಪಡೆದಿದ್ದರೂ ಪ್ರತಿ ದಿನಗಳಿಗೊಮ್ಮೆ ಪರೀಕ್ಷೆಗೊಳಪಡಿಸಿ ನೆಗೆಟಿವ್ ವರದಿ ಹೊಂದಿರಬೇಕು. ಶಾಲೆಗಳಲ್ಲಿ ಕೋವಿಡ್ ನಿಯಮ ಪಾಲನೆಯಾಗುವ ಬಗ್ಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮೇಲ್ವಿಚಾರಣೆ ನಡೆಸುತ್ತಿರಬೇಕು ಎಂಬಿತ್ಯಾದಿ ಮಾರ್ಗಸೂಚಿಗಳನ್ನು ಶಾಲೆಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಶುಕ್ರವಾರದಿಂದ (ಸೆ 17) ದ.ಕ. ಜಿಲ್ಲೆಯಲ್ಲಿ ಶಾಲೆ-ಪ್ರಥಮ ಪಿಯುಸಿ ಆರಂಭಿಸಲು ಡೀಸಿ ಅಸ್ತು : ಶುಲ್ಕ ಪಾವತಿಗೆ ಒತ್ತಾಯಿಸದಂತೆ ಎಚ್ಚರಿಕೆ Rating: 5 Reviewed By: karavali Times
Scroll to Top