ಟಿ-20 ವಿಶ್ವಕಪ್ ಟೂರ್ನಿಗೆ ಅದ್ದೂರಿ ಚಾಲನೆ : ಉದ್ಘಾಟನಾ ಪಂದ್ಯದಲ್ಲಿ ನೋಲಾಸ್ ಜಯದೊಂದಿಗೆ ಶುಭಾರಂಭಗೈದ ಓಮಾನ್ ತಂಡ - Karavali Times ಟಿ-20 ವಿಶ್ವಕಪ್ ಟೂರ್ನಿಗೆ ಅದ್ದೂರಿ ಚಾಲನೆ : ಉದ್ಘಾಟನಾ ಪಂದ್ಯದಲ್ಲಿ ನೋಲಾಸ್ ಜಯದೊಂದಿಗೆ ಶುಭಾರಂಭಗೈದ ಓಮಾನ್ ತಂಡ - Karavali Times

728x90

17 October 2021

ಟಿ-20 ವಿಶ್ವಕಪ್ ಟೂರ್ನಿಗೆ ಅದ್ದೂರಿ ಚಾಲನೆ : ಉದ್ಘಾಟನಾ ಪಂದ್ಯದಲ್ಲಿ ನೋಲಾಸ್ ಜಯದೊಂದಿಗೆ ಶುಭಾರಂಭಗೈದ ಓಮಾನ್ ತಂಡ

ಓಮನ್, ಅಕ್ಟೋಬರ್ 17, 2021 (ಕರಾವಳಿ ಟೈಮ್ಸ್) : ಟಿ-20 ವಿಶ್ವಕಪ್ ಟೂರ್ನಿಗೆ ಓಮಾನ್ ದೇಶದಲ್ಲಿ ಭಾನುವಾರ ಅದ್ದೂರಿ ಚಾಲನೆ ದೊರೆತಿದೆ. ಕೂಟದ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಓಮನ್ ತಂಡವು ಪಪುವಾ ನ್ಯೂಗಿನಿಯಾ ತಂಡವನ್ನು ಭರ್ಜರಿ 1 ವಿಕೆಟ್ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಶುಭಾರಂಭ ಮಾಡಿದೆ. ಓಮಾನ್ ತಂಡ ಪ್ರಥಮ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದಿದ್ದು, ಬಿ ಗ್ರೂಪಿನಲ್ಲಿ 2 ಅಂಕ ಸಂಪಾದಿಸಿದೆ.

130 ರನ್ ಗುರಿ ಪಡೆದ ಓಮನ್ ತಂಡಕ್ಕೆ ಆರಂಭಿಕ ಆಟಗಾರರಾದ ಅಖಿಬ್ ಇಲ್ಯಾಸ್ ಹಾಗೂ ಜಿತೇಂದ್ರ ಸಿಂಗ್ ಉತ್ತಮ ಜೊತೆಯಾಟದೊಂದಿಗೆ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಇಲ್ಯಾಸ್ ಹಾಗೂ ಜಿತೇಂದ್ರ ಸಿಂಗ್ ಇಬ್ಬರೂ ಆಕರ್ಷಕ ಅರ್ಧ ಶತಕದೊಂದಿಗೆ ಮಿಂಚಿದರು. ಆರಂಭಿಕ ಆಟಗಾರರ ಅಮೋಘ ಬ್ಯಾಟಿಂಗ್ ಕಾರಣದಿಂದ ಓಮನ್ ತಂಡ 13.4 ಓವರ್‍ಗಳಲ್ಲಿ ಯಾವುದೇ ಹುದ್ದರಿಯನ್ನು ಎದುರಾಳಿ ತಂಡಕ್ಕೆ ಒಪ್ಪಿಸದೆ 10 ವಿಕೆಟ್ ಭರ್ಜರಿ ಗೆಲುವು ಸಾಧಿಸಲು ನೆರವಾದರು. ಆಖಿಬ್ ಇಲ್ಯಾಸ್ ಅಜೇಯ 50 ರನ್ ಭಾರಿಸಿದರೆ, ಜಿತೇಂದ್ರ ಸಿಂಗ್ ಅಜೇಯ 73 ರನ್ ಸಿಡಿಸಿ ತಮ್ಮ ಬ್ಯಾಟಿಂಗ್ ವೈಭವ ತೋರಿದರು. 

ಮೊದಲು ಬ್ಯಾಟಿಂಗ್ ಮಾಡಿದ ಪಪುವಾ ನ್ಯೂಗಿನಿಯಾ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 129 ರನ್ ಮಾತ್ರ ಗಳಿಸುವಲ್ಲಿ ಸಫಲವಾಯಿತು. ನಾಯಕ ಅಸದ್ ವಾಲಾ ಅರ್ಧ ಶತಕ ತಂಡದ ಮೊತ್ತವನ್ನು ಶತಕ ದಾಟಿಸಿತು. ಅಸದ್ ವಾಲಾ 56 ರನ್ ಸಿಡಿಸಿ ಔಟಾದರೆ, ಚಾರ್ಲೆಸ್ ಅಮಿನಿ 37 ರನ್ ಸಿಡಿಸಿದರು. ಸೆಸೆ ಬುವಾ 13 ರನ್ ಭಾರಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಟಿ-20 ವಿಶ್ವಕಪ್ ಟೂರ್ನಿಗೆ ಅದ್ದೂರಿ ಚಾಲನೆ : ಉದ್ಘಾಟನಾ ಪಂದ್ಯದಲ್ಲಿ ನೋಲಾಸ್ ಜಯದೊಂದಿಗೆ ಶುಭಾರಂಭಗೈದ ಓಮಾನ್ ತಂಡ Rating: 5 Reviewed By: karavali Times
Scroll to Top