ಬೆಂಗಳೂರು, ಅಕ್ಟೋಬರ್ 18, 2021 (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಹಾಗೂ ಲಾಕ್ ಡೌನ್ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಪ್ರಾಥಮಿಕ ಹಂತದ ಶಾಲೆಗಳನ್ನು ಆರಂಭಿಸಲು ಇದೀಗ ಕೊರೋನಾ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಬಂದಿರುವ ಹಿನ್ನಲೆಯಲ್ಲಿ ಮತ್ತೆ ತೆರೆಯಲು ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಅಕ್ಟೋಬರ್ 25 ರಿಂದ 1 ರಿಂದ 5ನೇ ತರಗತಿಗಳನ್ನು ಭೌತಿಕವಾಗಿ ತೆರೆಯಲು ಸಜ್ಜಾಗಿದೆ. ದೀರ್ಘ ಸಮಯದ ಬಳಿಕ ಪುಟಾಣಿಗಳು ಮುಂದಿನ ಸೋಮವಾರದಿಂದ ಶಾಲೆಗಳತ್ತ ಹೆಜ್ಜೆ ಹಾಕಲಿದ್ದಾರೆ.
ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟ್ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ್ದು, ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಶಾಲೆಗಳ ಆರಂಭ ಕುರಿತಂತೆ ರಾಜ್ಯ ಸರಕಾರ ನೂತನ ಮಾರ್ಗಸೂಚಿಯನ್ನೂ ಪ್ರಕಟಿಸಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಪೆÇೀಷಕರ ಅನುಮತಿ ಕಡ್ಡಾಯ. ಮಕ್ಕಳಿಗೆ ಶಾಲೆ ಹಾಜರಾತಿ ಕಡ್ಡಾಯವಿಲ್ಲ. ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಸದ್ಯಕ್ಕೆ ತರಗತಿಯಲ್ಲಿ ಶೇಕಡ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ. ತರಗತಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್ ಶೀಲ್ಡ್ ಕಡ್ಡಾಯ. ಸದ್ಯ ಅರ್ಧ ದಿನ ಮಾತ್ರ ತರಗತಿ ನಡೆಸಲಾಗುತ್ತದೆ.
ಈ ಎಲ್ಲಾ ಮಾರ್ಗಸೂಚಿ ಅನುಸರಿಸಿ ಮುಂದಿನ ವಾರದಿಂದ ಪ್ರಾಥಮಿಕ ಶಾಲೆಗಳು ಭೌತಿಕವಾಗಿ ಆರಂಭವಾಗಲಿದೆ. ಕಳೆದ ಸೆಪ್ಟೆಂಬರ್ 23 ರಿಂದ 9 ರಿಂದ 12ನೇ ತರಗತಿ ಹಾಗೂ ಅಕ್ಟೋಬರ್ 6 ರಿಂದ 6-8ನೇ ತರಗತಿಗಳನ್ನು ಸರಕಾರ ಭೌತಿಕವಾಗಿ ಆರಂಭಿಸಲು ಸರಕಾರ ಅನುಮತಿ ನೀಡಿತ್ತು.
0 comments:
Post a Comment