ಟಿ-20 ವಿಶ್ವಕಪ್ : ಆಸೀಸನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಇಂಗ್ಲೆಂಡ್ ಗೆ 8 ವಿಕೆಟ್ ಭರ್ಜರಿ ಗೆಲುವು  - Karavali Times ಟಿ-20 ವಿಶ್ವಕಪ್ : ಆಸೀಸನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಇಂಗ್ಲೆಂಡ್ ಗೆ 8 ವಿಕೆಟ್ ಭರ್ಜರಿ ಗೆಲುವು  - Karavali Times

728x90

30 October 2021

ಟಿ-20 ವಿಶ್ವಕಪ್ : ಆಸೀಸನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಇಂಗ್ಲೆಂಡ್ ಗೆ 8 ವಿಕೆಟ್ ಭರ್ಜರಿ ಗೆಲುವು 

 ದುಬೈ, ಅಕ್ಟೋಬರ್ 31, 2021 (ಕರಾವಳಿ ಟೈಮ್ಸ್) : ದುಬೈ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬದ್ದ ಪ್ರತಿಸ್ಪರ್ಧಿಗಳಾದ ಆಸ್ಟ್ರೇಲಿಯಾ-ಇಂಗ್ಲೆಂಡ್ ಎದುರಾಗಿದ್ದು, ಆಸೀಸನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಕ್ರಿಕೆಟ್ ಜನಕರು ಎಂಟು ವಿಕೆಟ್ ಗಳ ಭರ್ಜರಿ ಜಯವನ್ನು ತಮ್ಮದಾಗಿಸಿಕೊಂಡಿದ್ದಾರೆ. 

 ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ‌ ಕೇವಲ 125 ರನ್ ಗಳನ್ನಷ್ಟೇ ಗಳಿಸಿತು. ಇಂಗ್ಲೆಂಡ್ ವೇಗಿಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಅಲ್ಪ ಮೊತ್ತಕ್ಕೆ ಕುಸಿಯಿತು. 

ಸಾಧಾರಣ ಮೊತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಜಾಸ್ ಬಟ್ಲರ್ ಅವರ ಸಿಡಿಲಬ್ಬರಸ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಕೇವಲ 11.4 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 126 ರನ್  ಗಳಿಸಿ ಗುರಿ ತಲುಪಿತು. 

ಇದರೊಂದಿಗೆ ಟೂರ್ನಿಯಲ್ಲಿ ಸತತ ಮೂರನೇ ಗೆಲುವು ದಾಖಲಿಸಿದ ಇಂಗ್ಲೆಂಡ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲೆರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಆಸೀಸ್ ಮೂರನೇ ಪಂದ್ಯದಲ್ಲಿ ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿದೆ. ಅಲ್ಲದೆ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಟಿ-20 ವಿಶ್ವಕಪ್ : ಆಸೀಸನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಇಂಗ್ಲೆಂಡ್ ಗೆ 8 ವಿಕೆಟ್ ಭರ್ಜರಿ ಗೆಲುವು  Rating: 5 Reviewed By: karavali Times
Scroll to Top