ನಿವೃತ್ತ ಭೂಸೇನಾ ಯೋಧನ ಮನೆ ಬಳಿ 40 ವರ್ಷ ಹಳೆಯ ಗ್ರೆನೇಡ್‍ಗಳು ಪತ್ತೆ : ದುಷ್ಕøತ್ಯದ ಸಂಚಿನ ಶಂಕೆ - Karavali Times ನಿವೃತ್ತ ಭೂಸೇನಾ ಯೋಧನ ಮನೆ ಬಳಿ 40 ವರ್ಷ ಹಳೆಯ ಗ್ರೆನೇಡ್‍ಗಳು ಪತ್ತೆ : ದುಷ್ಕøತ್ಯದ ಸಂಚಿನ ಶಂಕೆ - Karavali Times

728x90

7 November 2021

ನಿವೃತ್ತ ಭೂಸೇನಾ ಯೋಧನ ಮನೆ ಬಳಿ 40 ವರ್ಷ ಹಳೆಯ ಗ್ರೆನೇಡ್‍ಗಳು ಪತ್ತೆ : ದುಷ್ಕøತ್ಯದ ಸಂಚಿನ ಶಂಕೆ

ಉಪ್ಪಿನಂಗಡಿ, ನವೆಂಬರ್ 07, 2021 (ಕರಾವಳಿ ಟೈಮ್ಸ್) : ಭೂಸೇನಾ ನಿವೃತ್ತ ಎಸ್.ಸಿ.ಒ, ಬೆಳ್ತಂಗಡಿ ತಾಲೂಕು, ಇಂತಿಲ ಗ್ರಾಮದ ನಿವಾಸಿ ದಿವಂಗತ ಕೊರಗಪ್ಪ ಪೂಜಾರಿ ಅವರ ಪುತ್ರ ಜಯಕುಮಾರ್ ಪೂಜಾರಿ (66) ಅವರ ಮನೆ ಬಳಿ ದುಷ್ಕರ್ಮಿಗಳು ಗ್ರೆನೇಡ್ ಎಸೆದು ಹೋಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಶನಿವಾರ ಸಂಜೆ ವೇಳೆಗೆ ಜಯಕುಮಾರ್ ಅವರು ಉಪ್ಪಿನಂಗಡಿಯಿಂದ ಮನೆ ಕಡೆ ನಡೆದುಕೊಂಡು ಬರುತಿದ್ದ ವೇಳೆ ಮನೆಯ ದಾರಿಯ ಇಳಿಜಾರಿನ ಪ್ರದೇಶದಲ್ಲಿ ತಂತಿ ಬೇಲಿಯ ಎಡ ಭಾಗದಲ್ಲಿ ಹರಡಿದ ರೀತಿಯಲ್ಲಿ ಈ ಗ್ರೆನೇಡ್ ಎಸೆದು ಹೋಗಲಾಗಿದೆ. ಒಂದು ಗ್ರೆನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರ್ ಒಳಗೆ ಇದ್ದು, ಉಳಿದ 4 ಗ್ರೇನೇಡ್ ಗಳು ಹಾಗೆಯೇ ಹರಡಿದ ಸ್ಥಿತಿಯಲ್ಲಿ ಎಸೆದು ಹೋಗಲಾಗಿತ್ತು. ಜಯಕುಮಾರ್ ಅವರು ಭೂಸೇನಾ ರೆಜಿಮೆಂಟಿನಲ್ಲಿ ಹುದ್ದೆಯಲ್ಲಿದ್ದುದರಿಂದ ಇದನ್ನು ಗ್ರೆನೇಡ್ ಎಂಬುದಾಗಿ ಸುಲಭದಲ್ಲಿ ಪತ್ತೆ ಹಚ್ಚಿದ್ದರು.

ಗ್ರೆನೇಡ್‍ಗಳನ್ನು ಕಾಡು ಪ್ರಾಣಿಗಳು ಅಥವಾ ಇತರ ಪ್ರಾಣಿಗಳು ಬೇರಡೆಗೆ ಎಳೆದುಕೊಂಡು ಹೋದರೆ ಸಾರ್ವಜನಿಕರಿಗೆ ಅಪಾಯವಾಗುವುದನ್ನು ಅರಿತ ಜಯಕುಮಾರ್ ಅವರು ಅದನ್ನು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಗ್ರೆನೇಡ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇದು ಸುಮಾರು 40 ವರ್ಷಗಳಷ್ಟು ಹಳೆಯದಾದ ಸ್ಫೋಟಕಗಳೆಂದು ಪೊಲೀಸರು ಅಂದಾಜಿಸಿದ್ದಾರೆ. 

ಇದನ್ನು ದುಷ್ಕರ್ಮಿಗಳು ತೆರೆದ ಪ್ರದೇಶದಲ್ಲಿ ಎಸೆದು ಹೋಗಿದ್ದು, ಯಾವುದೋ ದುಷ್ಕøತ್ಯದ ಸಂಚು ಇರಬಹುದು ಎಂದು ಜಯಕುಮಾರ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 129/2021 ಕಲಂ 25, 1ಬಿ, 7 ಆಮ್ರ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ನಿವೃತ್ತ ಭೂಸೇನಾ ಯೋಧನ ಮನೆ ಬಳಿ 40 ವರ್ಷ ಹಳೆಯ ಗ್ರೆನೇಡ್‍ಗಳು ಪತ್ತೆ : ದುಷ್ಕøತ್ಯದ ಸಂಚಿನ ಶಂಕೆ Rating: 5 Reviewed By: karavali Times
Scroll to Top