ಡಿಸೆಂಬರ್ 3 ರಂದು ಮಂಗಳೂರು ವಿಭಾಗದ ಅಂಚೆ ಹಾಗೂ ಪಿಂಚಣಿದಾರರ ಅದಾಲತ್ - Karavali Times ಡಿಸೆಂಬರ್ 3 ರಂದು ಮಂಗಳೂರು ವಿಭಾಗದ ಅಂಚೆ ಹಾಗೂ ಪಿಂಚಣಿದಾರರ ಅದಾಲತ್ - Karavali Times

728x90

24 November 2021

ಡಿಸೆಂಬರ್ 3 ರಂದು ಮಂಗಳೂರು ವಿಭಾಗದ ಅಂಚೆ ಹಾಗೂ ಪಿಂಚಣಿದಾರರ ಅದಾಲತ್

 ಮಂಗಳೂರು, ನವೆಂಬರ್ 24, 2021 (ಕರಾವಳಿ ಟೈಮ್ಸ್) : ಮಂಗಳೂರು ಅಂಚೆ ವಿಭಾಗದ ಅರ್ಧವಾರ್ಷಿಕ ಪಿಂಚಣಿದಾರರ ಅದಾಲತ್ ಡಿಸೆಂಬರ್ 3 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಅಂಚೆ ವಿಭಾಗದ ಬಲ್ಮಠದಲ್ಲಿರುವ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ತ್ರೈಮಾಸಿಕ ಅಂಚೆ ಅದಾಲತ್ ನಡೆಯಲಿದೆ. 

ಅದಾಲತ್ತಿನಲ್ಲಿ ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು, ತಕರಾರುಗಳನ್ನು ಪರಿಶೀಲಿಸಲಾಗುವುದು. ಹಾಗೆಯೇ ಪಿಂಚಣಿದಾರರ ಅದಾಲತ್ತಿನಲ್ಲಿ ಪಿಂಚಣಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲಾಗುವುದು.

ಸಾರ್ವಜನಿಕರು ಇದಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರ ಮೂಲಕ “ಪಿಂಚಣಿದಾರರ ಅದಾಲತ್/  ಅಂಚೆ ಅದಾಲತ್” ತಲೆಬರಹದಡಿಯಲ್ಲಿ ನವೆಂಬರ್ 29ರೊಳಗೆ “ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಬಲ್ಮಠ, ಮಂಗಳೂರು 575002” ವಿಳಾಸಕ್ಕೆ ಅಥವಾ ದೂರುಗಳನ್ನು ವಾಟ್ಸಪ್ ಸಂಖ್ಯೆ 9448291072 ಗೆ ಕಳುಹಿಸಬಹುದು. ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಕಳುಹಿಸುವಂತೆ ಮಂಗಳೂರು ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಡಿಸೆಂಬರ್ 3 ರಂದು ಮಂಗಳೂರು ವಿಭಾಗದ ಅಂಚೆ ಹಾಗೂ ಪಿಂಚಣಿದಾರರ ಅದಾಲತ್ Rating: 5 Reviewed By: karavali Times
Scroll to Top