ನಂದಾವರ : ಮನೆಗೆ ಗುಡ್ಡ ಕುಸಿದು ಸ್ಲ್ಯಾಬ್ ಹಾನಿ, ಲಕ್ಷಾಂತರ ನಷ್ಟ, ಜೀವ ಹಾನಿಗೆ ಮುಂಚಿತವಾಗಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಆಗ್ರಹ - Karavali Times ನಂದಾವರ : ಮನೆಗೆ ಗುಡ್ಡ ಕುಸಿದು ಸ್ಲ್ಯಾಬ್ ಹಾನಿ, ಲಕ್ಷಾಂತರ ನಷ್ಟ, ಜೀವ ಹಾನಿಗೆ ಮುಂಚಿತವಾಗಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಆಗ್ರಹ - Karavali Times

728x90

14 July 2022

ನಂದಾವರ : ಮನೆಗೆ ಗುಡ್ಡ ಕುಸಿದು ಸ್ಲ್ಯಾಬ್ ಹಾನಿ, ಲಕ್ಷಾಂತರ ನಷ್ಟ, ಜೀವ ಹಾನಿಗೆ ಮುಂಚಿತವಾಗಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಆಗ್ರಹ

ಬಂಟ್ವಾಳ, ಜುಲೈ 14, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರ ಕಟ್ಲೆಮಾರು-ಗುಂಪುಮನೆ ನಿವಾಸಿ ಜಮೀಳಾ ಕೋಂ ಇಬ್ರಾಹಿಂ ಅಟೋ ಅವರ ಮನೆಯ ಹಿಂಭಾಗದ ಗುಡ್ಡ ಕುಸಿದು ಮನೆಯ ಸ್ಲ್ಯಾಬ್ ಬಿರುಕು ಬಿಟ್ಟಿದ್ದು ಅಪಾಯದ ಸ್ಥಿತಿ ಉಂಟಾಗಿದ್ದಲ್ಲದೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. 

ಕಳೆದ ವಾರ ಗುಡ್ಡ ಜರಿದು ಮನೆಯ ಸ್ಲ್ಯಾಬ್ ಬಿರುಕು ಉಂಟಾಗಿ ನಷ್ಟ ಉಂಟಾಗಿದ್ದರೆ, ಇದೀಗ ಮತ್ತೆ ಗುರುವಾರ (ಜುಲೈ 14) ರಂದು ಬೆಳಿಗ್ಗೆ ಗುಡ್ಡ ಕುಸಿತ ಉಂಟಾಗಿ ಮನೆಯ ಗೋಡೆಗೆ ಹಾನಿ ಉಂಟಾಗಿರುತ್ತದೆ. ಮನೆಯ ಹಿಂಭಾಗದಲ್ಲಿರುವ ಸರಕಾರಿ ಗುಡ್ಡಕ್ಕೆ ಸೂಕ್ತ ಕಾಯಕಲ್ಪ ಅಂದರೆ ಸುರಕ್ಷಿತ ತಡೆಗೋಡೆ ನಿರ್ಮಾಣ ಮಾಡಿ ಮನೆಗೆ ಉಂಟಾಗುವ ಅಪಾಯವನ್ನು ತಪ್ಪಿಸುವಂತೆ ಮನೆ ಮಂದಿ ಪಂಚಾಯತ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಈಗಾಗಲೇ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಲಿಖಿತ ಮನವಿಯನ್ನೂ ನೀಡಲಾಗಿದೆ. ಕಳೆದ ಮಳೆಗಾಲದ ಅವಧಿಯಲ್ಲಿ ಖುದ್ದು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಖುದ್ದು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕಾಯಕಲ್ಪ ಮಾಡಿರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಭಾರೀ ಅಪಾಯ ಹಾಗೂ ಜೀವ ಹಾನಿ ಉಂಟಾಗುವುದಕ್ಕಿಂತ ಮುಂಚಿತವಾಗಿ ಸೂಕ್ತ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಜಮೀಳಾ ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನಂದಾವರ : ಮನೆಗೆ ಗುಡ್ಡ ಕುಸಿದು ಸ್ಲ್ಯಾಬ್ ಹಾನಿ, ಲಕ್ಷಾಂತರ ನಷ್ಟ, ಜೀವ ಹಾನಿಗೆ ಮುಂಚಿತವಾಗಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಆಗ್ರಹ Rating: 5 Reviewed By: karavali Times
Scroll to Top