ಬಂಟ್ವಾಳ, ಜುಲೈ 14, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ತಾಲೂಕಿನ ಬಾಳ್ತಿಲ ಗ್ರಾಮದ ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ಆವರಣದಲ್ಲಿ ಬೃಹತ್ ಮರ ಬುಡಸಮೇತ ಉರುಳಿ ಬಿದ್ದು ಶಾಲೆಯ ಕಾಂಪೌಂಡ್ ಹಾಗೂ ಶಾಲಾ ಕುಟೀರಕ್ಕೆ ಆಂಶಿಕ ಹಾನಿಯಾಗಿರುತ್ತದೆ. ಮಾಣಿ ಗ್ರಾಮದ ಜನತಾ ಕಾಲೊನಿ ನಿವಾಸಿ ಮೈಮುನಾ ಕೋಂ ಪುತ್ತುಮೋನು ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಉಳಿ ಗ್ರಾಮದ ಯಮುನಾ ಕೋಂ ನಾರಾಯಣ ನಾಯ್ಕ ಅವರ ವಾಸ್ತವ್ಯದ ಪಕ್ಕಾ ಮನೆಯ ಹಿಂಬಾಗದ ಗೋಡೆ ಕುಸಿದು ಬಿದಿದ್ದು, ಭಾಗಶಃ ಹಾನಿ ಸಂಭವಿಸಿದೆ.
ಕೊಳ್ನಾಡು ಗ್ರಾಮದ ಬಸ್ತಿಮೂಲೆ ಎಂಬಲ್ಲಿ ಕುದ್ರಿಯ-ಕುಲಾಲು ಸಂಪರ್ಕ ಸೇತುವೆ ಮೇಲೆ ತೆಂಗಿನ ಮರ ಕುಸಿದು ಬಿದ್ದು ಸೇತುವೆ ಸಂಪರ್ಕ ಹಾದಿಯು ಕುಸಿಯುವ ಹಂತದಲ್ಲಿದೆ. ಅಮ್ಟಾಡಿ ಗ್ರಾಮದ ತಿಮ್ಮುಕೋಡಿ ನಿವಾಸಿ ಲೀನಾ ಕ್ರಾಸ್ತ ಬಿನ್ ಬೆಂಜಮಿನ್ ಕ್ರಾಸ್ತ ಅವರ ಮನೆ ಸಂಪೂರ್ಣ ಹಾನಿಯಾಗಿದೆ. ಬಂಟ್ವಾಳ ಕಸಬಾ ಗ್ರಾಮದ ಚಂಡ್ತಿಮಾರ್ ನಿವಾಸಿ ವಸಂತಿ ಅವರ ಮನೆಗೆ ಹಾನಿ ಸಂಭವಿಸಿದೆ. ಕರೋಪಾಡಿ ಗ್ರಾಮದ ಸಮಡ್ಕ ನಿವಾಸಿ ಉಮ್ಮರ್ ಅವರ ದಿನಸಿ ಅಂಗಡಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹಾನಿಯಾಗಿರುತ್ತದೆ.
ನರಿಕೊಂಬು ಗ್ರಾಮದ ಮುದೆಲಡಿ ನಿವಾಸಿಗಳಾದ ಸಂಜೀವ ಮೂಲ್ಯ ಹಾಗೂ ದೇವಕಿ ಅವರ ವಾಸದ ಮನೆಗೆ ಹಾನಿಯಾಗಿರುತ್ತದೆ. ಸಜಿಪಮುನ್ನೂರು ಗ್ರಾಮದ ನಂದಾವರ ಗುಂಪು ಮನೆ ನಿವಾಸಿ ಆತಿಕಾ ಕೋಂ ಎಂ ಜಿ ಅಬೂಬಕ್ಕರ್ ಅವರ ಮನೆ ಗೋಡೆ ಕುಸಿದು ಭಾಗಶಃ ಹಾನಿ ಸಂಭವಿಸಿರುತ್ತದೆ. ಬಿ ಮೂಡಾ ಗ್ರಾಮದ ಸುಂದರಿ ಕೋಂ ಸುಂದರ ದೇರ್ಲಕ್ಕೆ ಅವರ ಮನೆಗೆ ತೀವ್ರ ಹಾನಿ ಸಂಭವಿಸಿದೆ.
ಬಾಳ್ತಿಲ ಗ್ರಾಮದ ಹನುಮಾನ್ ನಗರ-ಬಹದ್ದೂರ್ ನಿವಾಸಿ ಮರಿಯಮ್ಮ ಕೋಂ ಮುಹಮ್ಮದ್ ಅವರ ವಾಸ್ತವ್ಯದ ಮನೆಯ ಮೇಲೆ ಹಲಸಿನ ಮರ ಬಿದ್ದು ಮನೆಗೆ ಹಾನಿ ಸಂಭವಿಸಿದೆ. ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ಮಂಜಕ್ಕು ಕೋಂ ಮುದ್ದ ನಲಿಕೆ ಅವರ ಮನೆಯು ಭಾಗಶಃ ಹಾನಿಯಾಗಿರುತ್ತದೆ. ಪಂಜಿಕಲ್ಲು ಗ್ರಾಮದ ನಿವಾಸಿಗಳಾದ ವಾರಿಜಾ ಅವರ ವಾಸ್ತವ್ಯ ಮನೆಯು ಮಳೆಯಿಂದಾಗಿ ಹಾನಿಯಾದರೆ, ಹಲ್ಬನ್ ಪಿಂಟೋ ಅವರ ದನದ ಕೊಟ್ಟಿಗೆ ಮಳೆಯಿಂದಾಗಿ ಭಾಗಶ ಹಾನಿಯಾಗಿರುತ್ತದೆ. ರಾಜೇಶ್ ಅವರ ವಾಸ್ತವ್ಯದ ಮನೆ ಗೋಡೆ ಮಳೆಯಿಂದ ಬಿರುಕು ಬಿಟ್ಟಿರುತ್ತದೆ ಎಂದು ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.
0 comments:
Post a Comment