ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಇಂದು (ಮಾ 16) ಮೂಡುನಡುಗೋಡುನಿಂದ ಆರಂಭವಾಗಿ ಲೊರೊಟ್ಟೊಪದವಿನಲ್ಲಿ ಸಮಾಪನ - Karavali Times ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಇಂದು (ಮಾ 16) ಮೂಡುನಡುಗೋಡುನಿಂದ ಆರಂಭವಾಗಿ ಲೊರೊಟ್ಟೊಪದವಿನಲ್ಲಿ ಸಮಾಪನ - Karavali Times

728x90

15 March 2023

ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಇಂದು (ಮಾ 16) ಮೂಡುನಡುಗೋಡುನಿಂದ ಆರಂಭವಾಗಿ ಲೊರೊಟ್ಟೊಪದವಿನಲ್ಲಿ ಸಮಾಪನ

ಬಂಟ್ವಾಳ, ಮಾರ್ಚ್ 16, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಮಾ 10 ರಂದು ಶುಕ್ರವಾರ ಚಾಲನೆಗೊಂಡ 14 ದಿನಗಳ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯು 6ನೇ ದಿನವಾದ ಮಾರ್ಚ್ 16 ರಂದು ಗುರುವಾರ (ಇಂದು) ಮೂಡುನಡುಗೋಡು, ಬುಡೋಳಿ, ಪಂಜಿಕಲ್ಲು, ಬಂಟ್ವಾಳ ಕಸಬಾ ಗ್ರಾಮಗಳಲ್ಲಿ ಸಂಚರಿಸಲಿದ್ದು, ಸಂಜೆ ಲೊರೆಟ್ಟೊಪದವು ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಭಾಷಣಗಾರರಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್ ಭಾಗವಹಿಸಲಿದ್ದಾರೆ ಎಂದು ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಇಂದು (ಮಾ 16) ಮೂಡುನಡುಗೋಡುನಿಂದ ಆರಂಭವಾಗಿ ಲೊರೊಟ್ಟೊಪದವಿನಲ್ಲಿ ಸಮಾಪನ Rating: 5 Reviewed By: karavali Times
Scroll to Top