ಮಂಗಳೂರು, ಮಾರ್ಚ್ 16, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬುಧವಾರ (ಮಾ 15) 3 ಮಾದಕ ದ್ರವ್ಯ ನಿಷೇದ ಕಾಯ್ದೆ ಪ್ರಕರಣಗಳು ಹಾಗೂ 1 ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್ ಡಿ ಪಿ ಎಸ್ ಪ್ರಕರಣದಲ್ಲಿ ಆರೋಪಿತ ಬೆಳ್ತಂಗಡಿ ತಾಲೂಕು, ಬಾರ್ಯ ಗ್ರಾಮದ, ಸೂರ್ಯ ನಿವಾಸಿ ಪಿ ಎಸ್ ಆದಂ ಎಂಬವರ ಪುತ್ರ ಪಿ ಎಸ್ ಅಬ್ದುಲ್ ಅಜೀಜ್ (30) ಹಾಗೂ ವಿಟ್ಲ ನಿವಾಸಿ ಬ್ಲೇಡ್ ಸಾದಿಕ್ ಎಂಬವರ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ 14,200/- ರೂಪಾಯಿ ಮೌಲ್ಯದ 7.1 ಗ್ರಾಂ ಎಂಡಿಎಂಎ, 11 ಸಾವಿರ ರೂಪಾಯಿ ನಗದು ಹಣ ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳಾದ ಮಂಗಳೂರು ತಾಲೂಕು ಬಜಾಲ್ ನಿವಾಸಿ ಬಾವಾ ಅವರ ಪುತ್ರ ತೌಸೀರ್ ಅಲಿಯಾಸ್ ತೌಚಿ (31) ಹಾಗೂ ಬಂಟ್ವಾಳ ತಾಲೂಕು, ಪುದು ಗ್ರಾಮದ ಮಾರಿಪಳ್ಳ-ಪಾಡಿ ನಿವಾಸಿ ರಫೀಕ್ ಎಂಬವರ ಪುತ್ರ ಯಾಸೀನ್ (27) ಎಂಬವರ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ 50 ಸಾವಿರ ರೂಪಾಯಿ ಮೌಲ್ಯದ 905 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿತ ಸಜಿಪಮೂಡ ಗ್ರಾಮದ ಸುಭಾಶ್ ನಗರ-ಗುರು ಮಂದಿರ ಬಳಿಯ ನಿವಾಸಿ ದಿವಂಗತ ಇಬ್ರಾಯಿಂ ಅವರ ಪುತ್ರ ಆಸೀಫ್ (30) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದ್ದು, ಬಂಧಿತನಿಂದ 2 ಸಾವಿರ ರೂಪಾಯಿ ಮೌಲ್ಯದ 1 ಗ್ರಾಂ ಎಂಡಿಎಂಎ, 80,600/- ರೂಪಾಯಿ ಮೌಲ್ಯದ 4.90 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಬಕಾರಿ ಕಾಯ್ದೆ ಪ್ರಕರಣ ದಾಖಲಾಗಿದ್ದು, ಆರೋಪಿ ಕಡಬ ತಾಲೂಕು, ನೆಕ್ಕಿಲಾಡಿ ಗ್ರಾಮದ ಕರ್ವಾಯಿ ನಿವಾಸಿ ಪಳಣಿಮುತ್ತು ಎಂಬವರ ಪುತ್ರ ಕುಮಾರ್ ಪಿ (57) ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ 2,100/- ರೂಪಾಯಿ ಮೌಲ್ಯದ 5.4 ಲೀಟರ್ ಮದ್ಯದ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ.
0 comments:
Post a Comment