ಮಂಗಳೂರು ಗೋಲಿಬಾರ್ ವೇಳೆ 22 ಮಂದಿಯ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ : ಬಂಧಿತರಿಗೆ ಜಾಮೀನು ಮಂಜೂರು - Karavali Times ಮಂಗಳೂರು ಗೋಲಿಬಾರ್ ವೇಳೆ 22 ಮಂದಿಯ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ : ಬಂಧಿತರಿಗೆ ಜಾಮೀನು ಮಂಜೂರು - Karavali Times

728x90

19 February 2020

ಮಂಗಳೂರು ಗೋಲಿಬಾರ್ ವೇಳೆ 22 ಮಂದಿಯ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ : ಬಂಧಿತರಿಗೆ ಜಾಮೀನು ಮಂಜೂರು

ಸಂತ್ರಸ್ತ ದೂರುದಾರರಿಗೆ ಮನ್ನಣೆ ನೀಡಿ ಪೆÇಲೀಸರ ಮೇಲೆ ಎಫ್‍ಐಆರ್ ದಾಖಲಿಸಲು ಹೈ ಸೂಚನೆಬೆಂಗಳೂರು (ಕರಾವಳಿ ಟೈಮ್ಸ್) : ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ಸಂದರ್ಭ ಪೊಲೀಸರು ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ಅಮಾಯಕರನ್ನು ಬಲಿ ಪಡೆದಿದ್ದಲ್ಲದೆ ಬಳಿಕ ನಡೆದ ಬೆಳವಣಿಗೆಯಲ್ಲಿ ಬಂಧಿಸಿದ 22 ಮಂದಿ ಅಮಾಯಕರಿಗೆ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರುಗೊಳಿಸಿದ್ದು, ಪೊಲೀಸರ ಬಂಧನ ಕ್ರಮ ಸರಿಯಲ್ಲ ಎಂದು ಹೈಕೋರ್ಟ್ ಪೊಲೀಸರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದೆ.

    ಆರೋಪಿಗಳ ಬಂಧನ ಮಾಡುವಾಗ ಪೆÇಲೀಸರು ಸರಿಯಾದ ಕ್ರಮವನ್ನು ಕೈಗೊಂಡಿಲ್ಲ. ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರೋದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸದೆ ಇರುವ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಎಲ್ಲಾ 22 ಮಂದಿಗೆ ಜಾಮೀನು ಮಂಜೂರು ಮಾಡಿದೆ.

    ಸಾಕ್ಷ್ಯ ಎಂದು ಪರಿಗಣಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬಂಧಿತರು ನೇರವಾಗಿ ಭಾಗಿಯಾಗಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಇಲ್ಲ ಎಂದು ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟು ಈ ಜಾಮೀನು ಮಂಜೂರು ಮಾಡಿದೆ.


ಪೆÇಲೀಸರ ವಿರುದ್ಧ ಎಫ್.ಐ.ಆರ್ ದಾಖಲಿಸಲು ಸೂಚನೆ

    ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮಂಗಳೂರು ಪೆÇಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ಪ್ರತಿಭಟನೆ ವೇಳೆ ಗುಂಪು ಚದುರಿಸುವ ನೆಪದಲ್ಲಿ ಪೆÇಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಪೊಲೀಸರಿಂದ ಹಿಂಸೆ ಅನುಭವಿಸಿದ ಮಂದಿ ಪೊಲೀಸರ ವಿರುದ್ದ ದೂರು ನೀಡಿದರೂ ಎಫ್.ಐ.ಆರ್. ದಾಖಲಾಗದ ಬಗ್ಗೆ ಸಂತ್ರಸ್ತರು ಹೈಕೋರ್ಟ್ ಮೊರೆ ಹೋಗಿದ್ದರು. ಸಂತ್ರಸ್ತರ ಅರ್ಜಿಯನ್ನು ಮನ್ನಿಸಿದ ನ್ಯಾಯಾಲಯ ಪೊಲೀಸರ ವಿರುದ್ದ ಎಫ್.ಐ.ಆರ್. ದಾಖಲು ಮಾಡುವಂತೆ ಆದೇಶಿಸಿದೆ.

    ಪೊಲೀಸರ ಹಿಂಸೆಯಿಂದ ಸಂತಸ್ತರಾದವರು ಈಗಾಗಲೇ ಪೊಲೀಸರ ವಿರುದ್ದ 10 ದೂರುಗಳನ್ನು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಸಮರ್ಪಕ ಸ್ಪಂದನೆ ನೀಡಿಲ್ಲ ಎಂದು ದೂರುದಾರರ ಪರ ವಕೀಲರು ಹೈಕೋರ್ಟ್ ನ್ಯಾಯವಾದಿಗಳ ಮುಂದೆ ವಾದ ಮಂಡಿಸಿದ್ದರು. ವಾದವನ್ನು ಪರಿಶೀಲಿಸಿದ ನ್ಯಾಯಾಲಯ ಪೆÇಲೀಸರ ವಿರುದ್ಧ ಎಫ್.ಐ.ಆರ್. ದಾಖಲಿಸಲು ಸೂಚಿಸಿದೆ.

ಜಾಹೀರಾತುಗಳು  
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಗೋಲಿಬಾರ್ ವೇಳೆ 22 ಮಂದಿಯ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ : ಬಂಧಿತರಿಗೆ ಜಾಮೀನು ಮಂಜೂರು Rating: 5 Reviewed By: lk
Scroll to Top