ಬೆಳ್ತಂಗಡಿ ಅಕ್ರಮ‌ ಗಣಿಗಾರಿಕೆಗೆ ತಹಶೀಲ್ದಾರ್ ದಾಳಿ : ಸ್ಫೋಟಕ, ಯಂತ್ರಗಳ ಸಹಿತ ಇಬ್ಬರ ದಸ್ತಗಿರಿ - Karavali Times ಬೆಳ್ತಂಗಡಿ ಅಕ್ರಮ‌ ಗಣಿಗಾರಿಕೆಗೆ ತಹಶೀಲ್ದಾರ್ ದಾಳಿ : ಸ್ಫೋಟಕ, ಯಂತ್ರಗಳ ಸಹಿತ ಇಬ್ಬರ ದಸ್ತಗಿರಿ - Karavali Times

728x90

21 March 2020

ಬೆಳ್ತಂಗಡಿ ಅಕ್ರಮ‌ ಗಣಿಗಾರಿಕೆಗೆ ತಹಶೀಲ್ದಾರ್ ದಾಳಿ : ಸ್ಫೋಟಕ, ಯಂತ್ರಗಳ ಸಹಿತ ಇಬ್ಬರ ದಸ್ತಗಿರಿ


ಬೆಳ್ತಂಗಡಿ (ಕರಾವಳಿ ಟೈಮ್ಸ್) : ತಾಲೂಕಿನ  ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ  ಅಕ್ರಮವಾಗಿ ನಡೆಯುತ್ತಿದ್ದ ಕಪ್ಪು ಕಲ್ಲು  ಗಣಿಗಾರಿಕೆ ಅಡ್ಢೆಗೆ ತಾಲೂಕು ತಹಶಿಲ್ದಾರ್ ಗಣಪತಿ ಶಾಸ್ತ್ರಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಗಣಿಗಾರಿಕೆಗೆ ಬಳಸುತ್ತಿದ್ದ ಸ್ಫೋಟಕ, ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಳ್ತಂಗಡಿ ತಾಲೂಕು, ಲಾಯಿಲ ನಿವಾಸಿ ರಮೇಶ ಎಂಬವರ ಪುತ್ರಪ್ರತೀಕ್ ಸಾಲ್ಯಾನ್ ಹಾಗೂ ಬೆಳ್ತಂಗಡಿ ತಾಲೂಕು, ಹಳದಂಗಡಿ ಗ್ರಾಮದ ಸುಲ್ಕೆರೆ ಮನೆ ಎಂಬಲ್ಲಿನ‌ ನಿವಾಸಿ ಮಂಜುನಾಥ ಎಂಬವರ ಪುತ್ರ ಅಣ್ಣಪ್ಪ ಎಂಬವರನ್ನು ಬಂಧಿಸಲಾಗಿದೆ.

ದಾಳಿ ವೇಳೆ ಅಧಿಕಾರಿಗಳು  ಜಿಲೆಟಿನ್ ಕಡ್ಡಿಗಳು, ವೈರ್, 11 ಜೀವಂತ ಮದ್ದುಗಳು, ಚೀಲದಲ್ಲಿದ್ದ 15 ಜಿಲೆಟಿನ್ ಕಡ್ಡಿಗಳು, ಕೆಲಸಕ್ಕೆ ಬಳಸಿದ ಟ್ರಾಕ್ಟರ್ ಟಿ (ನಂಬ್ರ: 33-ಎಎಕ್ಸ್ 7275), ಹಳದಿ ಇಟಾಚಿ (ನಂಬ್ರ:310), ಕೆಂಪು ಇಟಾಚಿ (ನಂಬ್ರ:22922) ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದುಕೊಂಡ ಸೊತ್ತುಗಳ ಒಟ್ಟು ಮೌಲ್ಯ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

 ಈ ಬಗ್ಗೆ ಬೆಳ್ತಂಗಡಿ ಪೊಲೀಸ್  ಠಾಣೆಯಲ್ಲಿ ಅಪರಾಧ ಕ್ರಮಾಂಕ :27-2020 ಕಲಂ:  ಕಲಂ: 9B (1)(b) Explosive Act 1884 ಯಂತೆ ಪ್ರಕರಣ ದಾಖಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ ಅಕ್ರಮ‌ ಗಣಿಗಾರಿಕೆಗೆ ತಹಶೀಲ್ದಾರ್ ದಾಳಿ : ಸ್ಫೋಟಕ, ಯಂತ್ರಗಳ ಸಹಿತ ಇಬ್ಬರ ದಸ್ತಗಿರಿ Rating: 5 Reviewed By: karavali Times
Scroll to Top