21 ದಿನಗಳ ಕಾಲ ಗೃಹಬಂಧನವಿದ್ದರೂ ಅಗತ್ಯ ಸೇವೆಗಳು ಅಬಾಧಿತ : ಮಂಗಳೂರು ಕಮಿಷನರ್ ಡಾ ಹರ್ಷ ಅಭಯ - Karavali Times 21 ದಿನಗಳ ಕಾಲ ಗೃಹಬಂಧನವಿದ್ದರೂ ಅಗತ್ಯ ಸೇವೆಗಳು ಅಬಾಧಿತ : ಮಂಗಳೂರು ಕಮಿಷನರ್ ಡಾ ಹರ್ಷ ಅಭಯ - Karavali Times

728x90

24 March 2020

21 ದಿನಗಳ ಕಾಲ ಗೃಹಬಂಧನವಿದ್ದರೂ ಅಗತ್ಯ ಸೇವೆಗಳು ಅಬಾಧಿತ : ಮಂಗಳೂರು ಕಮಿಷನರ್ ಡಾ ಹರ್ಷ ಅಭಯ

ಪೊಲೀಸ್ ಕಮಿಷನರ್ ಡಾ ಹರ್ಷ


ಮಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ಹಿಮ್ಮಟ್ಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯರಾತ್ರಿಯಿಂದಲೇ ಇಡೀ 21 ದಿನಗಳ ಕಾಲ ದೇಶದ ಜನತೆಗೆ ಗೃಹಬಂಧನ ಘೋಷಿಸುತ್ತಲೇ ಜನ ಅಗತ್ಯ ಸೇವೆಗಳ ಬಗ್ಗೆ ಚಿಂತಿತರಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಂಗಳೂರು ಪೊಲೀಸ್ ಕಮಿಷನರ್ ಡಾ ಹರ್ಷ ಅವರು ಜಿಲ್ಲೆಯ ಜನತೆಗೆ ಅಭಯ ನೀಡಿದ್ದಾರೆ. ಲಾಕ್ ಡೌನ್ ಇದ್ದರೂ ಜನ ಅಗತ್ಯ ಸೇವೆಗಳನ್ನು ಪಡೆದುಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಜನ ತಮ್ಮ ಅಗತ್ಯ ಸೇವೆಗಳನ್ನು ನಿರ್ಬಂಧಪೂರ್ವಕವಾಗಿಯೇ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈ ಬಗ್ಗೆ ಜನ ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: 21 ದಿನಗಳ ಕಾಲ ಗೃಹಬಂಧನವಿದ್ದರೂ ಅಗತ್ಯ ಸೇವೆಗಳು ಅಬಾಧಿತ : ಮಂಗಳೂರು ಕಮಿಷನರ್ ಡಾ ಹರ್ಷ ಅಭಯ Rating: 5 Reviewed By: karavali Times
Scroll to Top