ಬಂಟ್ವಾಳದಲ್ಲಿ ಅಗತ್ಯ ಸೇವೆಗೆ ತೊಂದರೆ ಇಲ್ಲ : ತಹಶೀಲ್ದಾರ್ ರಶ್ಮಿ - Karavali Times ಬಂಟ್ವಾಳದಲ್ಲಿ ಅಗತ್ಯ ಸೇವೆಗೆ ತೊಂದರೆ ಇಲ್ಲ : ತಹಶೀಲ್ದಾರ್ ರಶ್ಮಿ - Karavali Times

728x90

25 March 2020

ಬಂಟ್ವಾಳದಲ್ಲಿ ಅಗತ್ಯ ಸೇವೆಗೆ ತೊಂದರೆ ಇಲ್ಲ : ತಹಶೀಲ್ದಾರ್ ರಶ್ಮಿಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ದೇಶದ ಪ್ರಧಾನಿಯವರ ಕೋರಿಕೆಯಂತೆ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಸೇವೆಗಳು ಎಂದಿನಂತೆ ಲಭ್ಯವಿದ್ದು, ಜನರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿ ರಶ್ಮಿ ಎಸ್.ಆರ್. ನಾಗರಿಕರಿಗೆ ಅಭಯ ನೀಡಿದ್ದಾರೆ.

    ಬುಧವಾರ ರಾತ್ರಿ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ದಿನಸಿ, ತರಕಾರಿ, ಹಾಲು ಮೊದಲಾದ ಅಗತ್ಯ ವಸ್ತುಗಳ ಮಳಿಗೆಗಳು ಪ್ರತಿದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 12  ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮೆಡಿಕಲ್, ಪೆಟ್ರೋಲ್ ಬಂಕ್‍ಗಳು ಇಡೀ ದಿನ ಜನರ ಸೇವೆಗೆ ಲಭ್ಯವಿದೆ.

    ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಬರುವಾಗ ಕರೋನ ಸೋಂಕು ಹರಡದಂತೆ ತಮ್ಮ ಮಧ್ಯೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸುರಕ್ಷಾ ಮತ್ತು ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಸಾರ್ವಜನಿಕ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ತಹಶೀಲ್ದಾರ್ ರಶ್ಮಿ ಅವರು ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಅಗತ್ಯ ಸೇವೆಗೆ ತೊಂದರೆ ಇಲ್ಲ : ತಹಶೀಲ್ದಾರ್ ರಶ್ಮಿ Rating: 5 Reviewed By: karavali Times
Scroll to Top