ಬೆಳ್ತಂಗಡಿ (ಕರಾವಳಿ ಟೈಮ್ಸ್) : ತಾಲೂಕಿನ ಪಡ್ಡಂದಡ್ಕ ನೂರುಲ್ ಹುದಾ ಜುಮಾ ಮಸೀದಿ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕ, ಮಜ್ಲಿಸುನ್ನೂರ್ ವಾರ್ಷಿಕ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಪಿ.ಪಿ. ಅಹ್ಮದ್ ಸಖಾಫಿ ಉದ್ಘಾಟಿಸಿದರು. ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುವಾಶಿರ್ವಚನಗೈದರು. ಸ್ಥಳೀಯ ಖತೀಬ್ ಹಾಜಿ ಇಸ್ಹಾಕ್ ಫೈಝಿ ಕುಕ್ಕಿಲ ಮುಖ್ಯ ಭಾಷಣಗೈದರು.
ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪರಸ್ಕೃತ ಹರೇಕಳ ಹಾಜಬ್ಬ, ಮೂಡಬಿದ್ರೆ ಮದ್ರಸ ಮ್ಯಾನೇಜ್‍ಮೆಂಟ್ ನೂತನ ಅಧ್ಯಕ್ಷ ಹಾಜಿ ಅಹ್ಮದ್ ಹುಸೈನ್, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಅಝೀಝ್ ಮಾಲಿಕ್ ಎಸ್ಕೆಎಸ್ಸೆಸ್ಸೆಫ್ ವಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶ್ರಫ್ ಮರೋಡಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ವಿಶಾಲ್ ನಗರ, ಕೋಶಾಧಿಕಾರಿ ಶಬೀರ್ ಹಂಡೇಲು, ಸಂಘಟನಾ ಕಾರ್ಯದರ್ಶಿ ಹಸನ್ ಕುಟ್ಟಿ, ವಿಖಾಯ ಕಾರ್ಯದರ್ಶಿ ಅಬ್ದುಲ್ ಕರೀಂ, ವಿಶಾಲ್ ನಗರ ವಿಖಾಯ ಚೆಯರ್‍ಮೆನ್ ಹೈದರ್ ಕೋಟೆಬಾಗಿಲು ಅವರನ್ನು ಸನ್ಮಾನಿಸಲಾಯಿತು.
0 comments:
Post a Comment