ಸರಕಾರದ ಆದೇಶ ಪಾಲನೆಗೆ ಇನ್ನಷ್ಟು ಕಟಿಬದ್ದರಾಗೋಣ : ಶರೀಫ್ ನಂದಾವರ - Karavali Times ಸರಕಾರದ ಆದೇಶ ಪಾಲನೆಗೆ ಇನ್ನಷ್ಟು ಕಟಿಬದ್ದರಾಗೋಣ : ಶರೀಫ್ ನಂದಾವರ - Karavali Times

728x90

27 March 2020

ಸರಕಾರದ ಆದೇಶ ಪಾಲನೆಗೆ ಇನ್ನಷ್ಟು ಕಟಿಬದ್ದರಾಗೋಣ : ಶರೀಫ್ ನಂದಾವರಬಂಟ್ವಾಳ (ಕರಾವಳಿ ಟೈಮ್ಸ್) : ಮಾರಣಾಂತಿಕ ಕಾಯಿಲೆ ಕೋವಿಡ್-19 ದಿನದಿಂದ ದಿನಕ್ಕೆ ತನ್ನ ಕರಾಳ ಹಸ್ತವನ್ನು ಚಾಚುತ್ತಿದ್ದು, ಇದಕ್ಕೆ ನಾಗರಿಕ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗಿದೆ. ಕಾಯಿಲೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ದೇಶದ ಪ್ರಧಾನಿಯವರು ಸೂಕ್ತ ಸಮಯದಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಿದ್ದು, ಸರಿಯಾದ ಕ್ರಮವಾಗಿದ್ದು, ಇದನ್ನು ಇನ್ನಷ್ಟು ಕಠಿಣವಾಗಿ ಜನ ಪಾಲಿಸಬೇಕಾಗಿದೆ ಎಂದು ಸಜಿಪಮುನ್ನೂರು ಗ್ರಾ.ಪಂ. ಅಧ್ಯಕ್ಷ ಮುಹಮ್ಮದ್ ಶರೀಫ್ ನಂದಾವರ ಸಲಹೆ ನೀಡಿದ್ದಾರೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಈ ಮಾರಕ ಕಾಯಿಲೆಗೆ ಸೂಕ್ತ ಔಷಧಿಯಾಗಿದ್ದು, ಇದನ್ನು ಜನ ಯಥಾವತ್ ಪಾಲಿಸಿದರೆ ಕಾಯಿಲೆಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಬಹುದಾಗಿದೆ. ನಾಗರಕರು ಜನತಾ ಕಫ್ರ್ಯೂವನ್ನು ಉಲ್ಲಂಘಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಸರಕಾರದ ಆದೇಶ ಇನ್ನಷ್ಟು ಕಠಿಣವಾಗಿರಬೇಕಾಗಿದೆ ಎಂದರು.

    ಲಾಕ್ ಡೌನ್ ಅವಧಿಯಲ್ಲಿ ಸರಕಾರ ಜನಸಾಮಾನ್ಯರ ಅಗತ್ಯ ಸೇವೆಗಳನ್ನು ಒದಗಿಸಿಕೊಡಲು ಸಮರ್ಪಕ ವ್ಯವಸ್ಥೆ ಕೊಡಬೇಕಾಗಿದ್ದು, ಇದು ಗ್ರಾಮ ಮಟ್ಟದಿಂದಲೇ ಸೂಕ್ತವಾಗಿ ಅಚ್ಚುಕಟ್ಟಾಗಿ ನಡೆಯಬೇಕಾಗಿದೆ ಎಂದು ಶರೀಫ್ ನಂದಾವರ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸರಕಾರದ ಆದೇಶ ಪಾಲನೆಗೆ ಇನ್ನಷ್ಟು ಕಟಿಬದ್ದರಾಗೋಣ : ಶರೀಫ್ ನಂದಾವರ Rating: 5 Reviewed By: karavali Times
Scroll to Top