ಎ. 19 ರಂದು ನಿಗದಿಯಾಗಿದ್ದ ನವಚೇತನಾ ಸಾಮೂಹಿಕ ವಿವಾಹ ಜೂ 7ಕ್ಕೆ ಮುಂದೂಡಿಕೆ - Karavali Times ಎ. 19 ರಂದು ನಿಗದಿಯಾಗಿದ್ದ ನವಚೇತನಾ ಸಾಮೂಹಿಕ ವಿವಾಹ ಜೂ 7ಕ್ಕೆ ಮುಂದೂಡಿಕೆ - Karavali Times

728x90

27 March 2020

ಎ. 19 ರಂದು ನಿಗದಿಯಾಗಿದ್ದ ನವಚೇತನಾ ಸಾಮೂಹಿಕ ವಿವಾಹ ಜೂ 7ಕ್ಕೆ ಮುಂದೂಡಿಕೆಬಂಟ್ವಾಳ (ಕರಾವಳಿ ಟೈಮ್ಸ್) : ನವಚೇತನ ಸೇವಾ ಟ್ರಸ್ಟ್ ರಿ, ಬಂಟ್ವಾಳ ಇದರ ವತಿಯಿಂದ ಎಪ್ರಿಲ್ 19 ರಂದು ಬಿ ಸಿ ರೋಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಾರೋನ ಸೋಂಕು ಕಾರಣದಿಂದ ಮುಂದೂಡಲಾಗಿದ್ದು, ಮುಂದಿನ ಜೂನ್ 7 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ರಾಜಾ ಪಲ್ಲಮಜಲು ತಿಳಿಸಿದ್ದಾರೆ.

    ಈಗಾಗಲೇ ವಿವಾಹ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿಕೊಂಡಿರುವ ವಧೂ-ವರರು ಸಹಕರಿಸುವುದರ ಜೊತೆಗೆ ಮೇ 25ರವರೆಗೂ ಹೆಸರು ನೋಂದಣಿ ಮಾಡಲು ಅವಕಾಶವಿದೆ. ಈ ಪ್ರಯುಕ್ತ ಮಾಡಲಾಗಿರುವ ಲಕ್ಕೀ ಕೂಪನ್ ಡ್ರಾ ದಿನಾಂಕವನ್ನು ಎಪ್ರಿಲ್ 19 ರ ಬದಲಿಗೆ ಜೂನ್ 7ಕ್ಕೆ ಮುಂದೂಡಲಾಗಿದೆ. ಸರ್ವರೂ ಸಹಕರಿಸುವಂತೆ ಹಾಗೂ ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆಗಳಾದ 9880880255, 9482349990 ಹಾಗೂ 9740063163 ಗಳನ್ನು ಸಂಪರ್ಕಿಸಬಹುದು ಎಂದು ರಾಜಾ ಪಲ್ಲಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಎ. 19 ರಂದು ನಿಗದಿಯಾಗಿದ್ದ ನವಚೇತನಾ ಸಾಮೂಹಿಕ ವಿವಾಹ ಜೂ 7ಕ್ಕೆ ಮುಂದೂಡಿಕೆ Rating: 5 Reviewed By: karavali Times
Scroll to Top