ಕೋರೊನಾ ವೈರಸ್ ನಿಂದ ಮೃತಪಟ್ಟ ವೃದ್ದೆಯ ಶವಸಂಸ್ಕಾರಕ್ಕೆ ಅಲೆದಾಡಿಸಿದ್ದು ಖೇದಕರ : ಬೇಬಿ ಕುಂದರ್ - Karavali Times ಕೋರೊನಾ ವೈರಸ್ ನಿಂದ ಮೃತಪಟ್ಟ ವೃದ್ದೆಯ ಶವಸಂಸ್ಕಾರಕ್ಕೆ ಅಲೆದಾಡಿಸಿದ್ದು ಖೇದಕರ : ಬೇಬಿ ಕುಂದರ್ - Karavali Times

728x90

24 April 2020

ಕೋರೊನಾ ವೈರಸ್ ನಿಂದ ಮೃತಪಟ್ಟ ವೃದ್ದೆಯ ಶವಸಂಸ್ಕಾರಕ್ಕೆ ಅಲೆದಾಡಿಸಿದ್ದು ಖೇದಕರ : ಬೇಬಿ ಕುಂದರ್ಬಂಟ್ವಾಳ (ಕರಾವಳಿ ಟೈಮ್ಸ್) : ಗುರುವಾರ ಕೊರೋನಾ ಸೋಂಕಿನಿಂದಾಗಿ ಮೃತಪಟ್ಟ ಹಿರಿಯ ಮಹಿಳೆಯ ಮೃತದೇಹದ ಅಂತ್ಯಕ್ರಿಯೆ ನಡೆಸುವಲ್ಲಿ ಗೊಂದಲ ಸೃಷ್ಠಿಸಿದ್ದು ವಿಷಾದನೀಯವಾಗಿದೆ.
 ಅಂತ್ಯಕ್ರಿಯೆ ನಡೆಸಲು ತಡೆವೊಡ್ಡಿ ಶವವನ್ನು ಅಲ್ಲಿಂದಿಲ್ಲಿಗೆ ಅಲೆದಾಡಿಸುವಂತೆ ಮಾಡುವ ಕೃತ್ಯವು ತೀರಾ ಅಮಾನವೀಯವಾಗಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.

ಮೃತದೇಹವನ್ನು  ಗೌರವಯುತವಾಗಿ ಶವ ಸಂಸ್ಕಾರ ನಡೆಸುವ ಸಂಸ್ಕ್ರತಿಗೆ  ವಿರುದ್ಧವಾಗಿ ಮೃತದೇಹಕ್ಕೆ  ಅಗೌರವ ತೋರುವುದು ಯಾವುದೇ ಮನುಷ್ಯನಿಗೂ ಶೋಭೆ ತರುವುದಿಲ್ಲ ಎಂದಿದ್ದಾರೆ.

 ಮುಂದಿನ ದಿನಗಳಲ್ಲಿ ಇಂತಹ ಅಮಾನವೀಯ ವರ್ತನೆ ಕಂಡು ಬರದಂತೆ  ಜಿಲ್ಲಾಡಳಿತ  ಸೂಕ್ತ‌ ಎಚ್ಚರಿಕೆ ವಹಿಸಬೇಕು ಎಂದ‌ ಬೇಬಿ ಕುಂದರ್  ಬಂಟ್ವಾಳದ ನಿವಾಸಿಯಾಗಿರುವ ಮಹಿಳೆಗೆ ಬಂಟ್ವಾಳದ ಸ್ಮಶಾನದಲ್ಲೂ ಅಂತ್ಯಕ್ರಿಯೆಗೆ ಅವಕಾಶ ಸಿಗದಿರುವುದು ಅಘಾತಕಾರಿ ವಿಚಾರವಾಗಿದೆ.
ಮೃತರ ಕುಟುಂಬದವರು ದುಃಖದಲ್ಲಿರುವಾಗ ಹೆಣವನ್ನು ಸ್ಮಶಾನದದಿಂದ ಸ್ಮಶಾನಕ್ಕೆ ಅಲೆದಾಡಿಸಿದ್ದು ಮಾನವ ಕುಲವೇ ತಲೆ ತಗ್ಗಿಸುವಂತ ವಿಚಾರವಾಗಿದೆ ಎಂದಿದ್ದಾರೆ.

ಟಾಸ್ಕ್ಫೋಫೋರ್ಸ್ ನಲ್ಲಿರುವ  ಜನ ಪ್ರತಿನಿಧಿಗಳು ಸಮಿತಿಗೆ ಸೀಮಿತವಾಗದೆ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ, ಮುಖ್ಯವಾಗಿ ಮೃತದೇಹದ ಗೌರವಯುತ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವ ಮೂಲಕ  ಮಾನವೀಯತೆಯನ್ನು ಮೆರೆಯಬೇಕಾಗಿದೆ ಎಂದು ಬೇಬಿ ಕುಂದರ್ ಸಲಹೆ ನೀಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೋರೊನಾ ವೈರಸ್ ನಿಂದ ಮೃತಪಟ್ಟ ವೃದ್ದೆಯ ಶವಸಂಸ್ಕಾರಕ್ಕೆ ಅಲೆದಾಡಿಸಿದ್ದು ಖೇದಕರ : ಬೇಬಿ ಕುಂದರ್ Rating: 5 Reviewed By: karavali Times
Scroll to Top