ಬಿಜೆಪಿ ಸ್ಥಾಪನೆ ದಿನಾಚರಿಸಲು ಮೋದಿ ಕೊರೋನಾ ಬಳಸಿಕೊಂಡರೇ : ಟ್ವೀಟ್ ಮೂಲಕ ಮೋದಿ ಕುಟುಕಿದ ಕುಮಾರಸ್ವಾಮಿ - Karavali Times ಬಿಜೆಪಿ ಸ್ಥಾಪನೆ ದಿನಾಚರಿಸಲು ಮೋದಿ ಕೊರೋನಾ ಬಳಸಿಕೊಂಡರೇ : ಟ್ವೀಟ್ ಮೂಲಕ ಮೋದಿ ಕುಟುಕಿದ ಕುಮಾರಸ್ವಾಮಿ - Karavali Times

728x90

5 April 2020

ಬಿಜೆಪಿ ಸ್ಥಾಪನೆ ದಿನಾಚರಿಸಲು ಮೋದಿ ಕೊರೋನಾ ಬಳಸಿಕೊಂಡರೇ : ಟ್ವೀಟ್ ಮೂಲಕ ಮೋದಿ ಕುಟುಕಿದ ಕುಮಾರಸ್ವಾಮಿಬೆಂಗಳೂರು (ಕರಾವಳಿ ಟೈಮ್ಸ್) : ಭಾನುವಾರ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು 9 ನಿಮಿಷ ಆರಿಸಿ ಬಾಗಿಲು, ಕಿಟಕಿ, ಬಾಲ್ಕನಿಗಳಲ್ಲಿ £ಂತು ದೀಪ, ಮೊಂಬತ್ತಿ ಹಚ್ಚಿ ದೇಶದ ಸುಭಿಕ್ಷೆಗಾಗಿ ಪ್ರಾರ್ಥಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿರುವುದಕ್ಕೆ ಸಮಾಜದ ವಿವಿಧ ವರ್ಗದ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಇದೀಗ ವಿರೋಧ ಪಕ್ಷ ಜೆಡಿಎಸ್ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಸರಣಿ ಟ್ವೀಟ್‍ಗಳ ಮೂಲಕ ಹರಿಹಾಯ್ದಿದ್ದಾರೆ. ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇರುವಾಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ತರದ ತೋರಿಕೆಯ ಸಂಭ್ರಮ ಬೇಕೇ ಎಂದು ಪ್ರಶ್ನಿಸಿದ್ದಾರೆ.

ಎಪ್ರಿಲ್ 6, 1980 ಬಿಜೆಪಿ ಸಂಸ್ಥಾಪನಾ ದಿನ. ಇಂದಿಗೆ ಬಿಜೆಪಿಗೆ 40 ವರ್ಷ ತುಂಬುತ್ತದೆ. ಬಿಜೆಪಿಯ ಸಂಸ್ಥಾಪನಾ ದಿನ ಆಚರಿಸಲು ಕೊರೋನಾ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡಿರಬಹುದು ಎಂಬ ಸಂಶಯ ಕಾಡುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಸಂದೇಹ ವ್ಯಕ್ತಪಡಿಸಿದ್ದಾರೆ.

ಜಗತ್ತು ಕೊರೋನಾ ಮಹಾಮಾರಿಯಿಂದ ತತ್ತರಿಸುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ? ದೇಶದ ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ಪ್ರಧಾನಿ ಏಪ್ರಿಲ್ ಐದನ್ನೇ ಆಯ್ದುಕೊಂಡದ್ದಕ್ಕೆ ಬೇರೆ ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿ ಸ್ಥಾಪನೆ ದಿನಾಚರಿಸಲು ಮೋದಿ ಕೊರೋನಾ ಬಳಸಿಕೊಂಡರೇ : ಟ್ವೀಟ್ ಮೂಲಕ ಮೋದಿ ಕುಟುಕಿದ ಕುಮಾರಸ್ವಾಮಿ Rating: 5 Reviewed By: karavali Times
Scroll to Top